27,28 ರಂದು ಎರಡು ದಿನಗಳ ಜೈನ ಉತ್ಸವ ಆಯೋಜನೆ

Kuntinath
By Kuntinath
27,28 ರಂದು ಎರಡು ದಿನಗಳ ಜೈನ ಉತ್ಸವ ಆಯೋಜನೆ
WhatsApp Group Join Now
Telegram Group Join Now

*ಆ 27,28 ರಂದು ಎರಡು ದಿನಗಳ ಜೈನ ಉತ್ಸವ ಆಯೋಜನೆ*

ಬೆಳಗಾವಿ.ಆ.20: ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಸಂಸ್ಥೆ ಬೆಳಗಾವಿ ವಲಯ ವತಿಯಿಂದ ಇದೇ ಆಗಸ್ಟ 27 ಮತ್ತು 28 ರಂದು ಮೂರನೇಯ ಆವೃತ್ತಿಯ ಎರಡು ದಿನಗಳ ಜೈನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯ ಕಾರ್ಯದರ್ಶಿ ಅಶೋಕ ಕಟಾರಿಯಾ ಅವರು ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿತೋ ಸಂಸ್ಥೆಯ ವತಿಯಿಂದ ಈಗಾಗಲೇ ಎರಡು ಉತ್ಸವಗಳನ್ನು ಬೆಳಗಾವಿಯಲ್ಲಿ ನಡೆಸಲಾಗಿದೆ. ಇದೀಗ ಜಿತೋ ಕೆಕೆಜಿ ವಲಯ ಮತ್ತು ಮಹಾರಾಷ್ಟ್ರ ವಲಯಗಳ ಸಹಯೋಗದಲ್ಲಿ 3 ನೇ ಆವೃತ್ತಿಯನ್ನು ಆಯೋಜಿಸಲಾಗಿದ್ದು, ಈ ಉತ್ಸವದಲ್ಲಿ ಎಲ್ಲ ಸಮಾಜಕ್ಕೆ ಅನಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ ಅವರು ಈ ಎಲ್ಲ ಕಾರ್ಯಕ್ರಮಗಳು ಕೆ.ಎಲ್.ಇ.ಡಾ. ಬಿ.ಎಸ್. ಜಿರಗೆ ಸಭಾಗಂಣದಲ್ಲಿ ನಡೆಯಲಿವೆ ಎಂದು ಅವರು ಹೇಳಿದರು.

ಆಗಸ್ಟ 27 ರಂದು ಬೆಳಿಗ್ಗೆ 11 ಗಂಟೆಗೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿತೋ ಅಪೆಕ್ಸ ಜೆಬಿಎನ್ ಮುಖ್ಯಸ್ಥ ರಾಜೇಶ ಚಂದನ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ಅಂದು ಉದ್ಯಮಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ತದನಂತರ ಪ್ರೇರಕ ಕಥಾಗಾರ ಶಾಂತಿಲಾಲ ಗುಲೆಛಾ ಅವರು ಜೀನವದಲ್ಲಿ ಅತ್ಯುತ್ತಮ ನಡುವಳಿಕೆ ಕುರಿತು ಮಾತನಾಡಲಿದ್ದಾರೆ. ಅದರಂತೆ ಇಂದಿನ ವ್ಯಾಪಾರಿಕರಣದಲ್ಲಿ ಯಾಂತ್ರಿಕತೆಯ ಬಗ್ಗೆ ಕೇವಲ ಕಿಶನ ಅವರು ಒಂದು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಮಧ್ಯಾಹ್ನದ ಸಮಯದಲ್ಲಿ ಜಿತೋ ಜಾಬ್ಸ ಯೋಜನೆಯಡಿ ನಿರುದ್ಯೋಗ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಒಂದು ಬೃಹತ್ತ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ನಾಡಿನಾದ್ಯಂತ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಈ ಕಂಪನಿಗಳಲ್ಲಿ ನಮ್ಮ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅಂದು ಸಾಯಂಕಾಲ ರಿಷಬ ಮತ್ತು ಸಂಭವ ಅವರಿಂದ ಧಾರ್ಮಿಕ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಆಗಸ್ಟ 28 ರಂದು ಬೆಳಿಗ್ಗೆ ಶಾರ್ಕ ಟ್ಯಾಂಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಡಿ ಹೊಸದಾಗಿ ಪ್ರಾರಂಭಿಸಿದ ಉದ್ಯೋಗಗಳಲ್ಲಿ ಹಣ ಹೂಡುವ ಮೂಲಕ ಯುವ ಉದ್ಯಮಿದಾರರಿಗೆ ಪ್ರೋತ್ಸಾಹ ನೀಡಲಾಗುವುದು.ಈ ರೀತಿಯ ಪ್ರಯತ್ನ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಈಗಾಗಲೇ 20 ಕ್ಕೂ ಹೆಚ್ಚು ಸ್ಟಾರ್ಟಅಪ್ ಕಂಪನಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆ. ಓಂ ಜೈನ, ಯಶ ರಾಜೇಂದ್ರ , ಅರುಣ ಲಾಲವಾಣಿ, ವಿನೋದ ಜೈನ, ಶಿಖಾ ಹರಣ, ಸೇರಿದಂತೆ ಮೊದಲಾದ ಹಣಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತದನಂತರ ಯುನಿಕಾರ್ನ ಸ್ಪೀಕರ್ ಸೌರಭ ಜೈನ ಅವರಿಂದ ಪ್ರೇರಣಾ ಭಾಷಣ ಕಾರ್ಯಕ್ರಮ ನಡೆಯಲಿದೆ. ಅಂದು ಸಾಯಂಕಾಲ ರಿಶ್ತೆ ಜೈನ ವಧುವರ ಸಮಾವೇಶ, ಮತ್ತು ಜೈನ್ಸ ಟ್ಯಾಲಂಟ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಈ ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಎಲ್ಲ ಸಮಾಜದವರು ಭಾಗವಹಿಸಬಹುದಾಗಿದೆ. ಈ ಎರಡು ದಿನಗಳ ಕಾರ್ಯಗಳಿಗಾಗಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ನೊಂದಣಿಗಾಗಿ ಜಿತೋ ಸಂಸ್ಥೆಯ ಕಾರ್ಯಾಲಯವನ್ನು ಸಂಪರ್ಕೀಸಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜೈನ ಉತ್ಸವ ಕಾರ್ಯಕ್ರಮ ಸಂಯೋಜಕ ಅಮಿತ ದೋಷಿ, ಸಹ ಸಂಯೋಜಕ ಪುಷ್ಪಕ ಹನಮಣ್ಣವರ, ಜಿತೊ ಲೇಡಿಜ ಅಧ್ಯಕ್ಷೆ ಮಾಯಾ ಜೈನ, ಜಿತೊ ಯುಥ ವಿಂಗ ಅಧ್ಯಕ್ಷ ದೀಪಕ ಸುಬೇದಾರ, ರಾಹುಲ ಹಜಾರೆ, ಅಭಯ ಆದಿಮನಿ, ಕುಂತಿನಾಥ ಕಲಮನಿ , ರಾಜ ದೊಡ್ಡಣ್ಣವರ, ನವರತ್ನ ಜೈನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
**********************

WhatsApp Group Join Now
Telegram Group Join Now
Share This Article