ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಗುರಿ ಮುಖ್ಯ- ಜಿನೇಂದ್ರ ಖನಗಾಂವಿ
(ಫೋಟೊ ಕ್ಯಾಪ್ಶನ್: 001: ಜಿತೋ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಯುಪಿಎಸ್ಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆ ಕುರಿತ ಮಾರ್ಗದರ್ಶನ ಕಾರ್ಯಕ್ರಮವನ್ನು ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾಂವಿ ಹಾಗೂ ಐಆರ್‌ಎಸ್ ಅಧಿಕಾರಿ ಅಜಯಕುಮಾರ ಜೈನ ಅವರು ಉದ್ಘಾಟಿಸಿದರು. ಜಿತೋ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.)
ಬೆಳಗಾವಿ. ಏ.: 18 : ವಿದ್ಯಾರ್ಥಿಗಳು ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರ್ಧಿಷ್ಟವಾದ ಗುರಿ ಹೊಂದುವುದು ಮುಖ್ಯವಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾಂವಿ ಅವರು ಅಭಿಪ್ರಾಯಪಟ್ಟರು.
ಬೆಳಗಾವಿಯ ಗೋಗಟೆ ಕಾಲೇಜಿನ ಕೆ.ಕೆ.ವೇಣುಗೋಪಾಲ ಸಭಾಗೃಹದಲ್ಲಿ ಬುಧವಾರದಂದು ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಯಿಪಿಎಸ್ಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳಿಗೆ ಯುಪಿಎಸ್ಸ್ಸಿ ಪರೀಕ್ಷೆ ಎಂದರೆ ಅತೀ ಕಠಿಣವಾದ ಪರೀಕ್ಷೆ ಎಂಬ ಮನೊಭಾವನೆ ಮೂಡಿದೆ. ಈ ಪರೀಕ್ಷೆ ಬರೆಯಲು ಇಂಗ್ಲಿಷ ಭಾಚೆ ಕಡ್ಡಾಯವಾಗಿ ಬರಲೇಬೆಕೆಂಬ ತಪ್ಪು ಮಾಹಿತಿ, ಹಾಗೂ ಇದು ನನ್ನಿಂದ ಸಾಧ್ಯವಾಗುವುದಿಲ್ಲ ಎಂಬ ಮಾನಸಿಕತೆ ಇರುವುದು . ಇಂತಹ ಅಂಶಗಳು ಇರುವುದರಿಂದ ವಿದ್ಯಾರ್ಥಿಗಳು ಯುಪಿಎಸ್ಸ್ಸಿ ಪರೀಕ್ಷೆ ಬರೆಯಲು ಹಿಂಜರೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಯುಪಿಎಸ್ಸ್ಸಿ ಪರೀಕ್ಷೆಯನ್ನು ಎದುರಿಸಲು ಸ್ವಲ್ಪ ಶ್ರಮ ವಹಿಸಬೇಕು. ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾಹಿತಿ ಹೊಂದಬೇಕು. ಪ್ರತಿದಿನ ಪತ್ರಿಕೆ ಓದಬೇಕು. ಶಾಲಾದಿನಗಳಲ್ಲಿ ಕಲಿತ ಇತಿಹಾಸ, ಸಾಮಾಜಿಕ ವಿಷಯಗಳನ್ನು ಮತ್ತೆ ನೆನೆಪಿಸಿಕೊಳ್ಳುವುದು ಸೇರಿದಂತೆ ನಾನು ಪರೀಕ್ಷೆಯನ್ನು ಬರೆಯುತ್ತೇನೆ ಎಂಬ ಛಲ ಮತ್ತು ಗುರಿ ಹೊಂದಿರಬೇಕೆAದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಐಆರ್‌ಎಸ್ ಅಧಿಕಾರಿ ಅಜಯಕುಮಾರ ಜೈನ ಅವರು ಮಾತನಾಡಿ, ಯುಪಿಎಸ್ಸ್ಸಿ ಪರೀಕ್ಷೆಗಳನ್ನು ಎದುರಿಸುವಾಗ ಯಾವುದೇ ಮಾನಸಿಕ ಒತ್ತಡವನ್ನು ತೆಗೆದುಕೊಳ್ಳಬಾರದು. ದಿನನಿತ್ಯ 8 ರಿಂದ 10 ಗಂಟೆಯವರೆಗೆ ಓದುವುದನ್ನು ರೂಢೀ ಮಾಡಿಕೊಳ್ಳಬೇಕು. ಜೈನ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆAಬ ಉದ್ದೇಶದಿಂದ ಜಿತೋ ಸಂಸ್ಥೆಯು ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಈ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಈ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಸಮಾರಂಭದಲ್ಲಿ ಜೆ.ಎ.ಟಿ.ಎಫ್.ಕೆಕೆಜಿ ವಲಯ ಸಂಯೋಜಕ ಮಹೇಶ ನಾಹರ, ಜೆ.ಎ.ಟಿ.ಎಫ್ ಕೆಕೆಜಿ ವಲಯ ಚೇರಮನ್ ರಮೇಶಚಂದ್ರ ಬೋಹರಾ, ಜೆ.ಎ.ಟಿ.ಎಫ್. ಅಪೆಕ್ಸ ಉಪಾಧ್ಯಕ್ಷ ವಿಕ್ರಮ ಜೈನ ಕೆಕೆಜಿ ಚೇರಮನ್ ಅಶೋಕ ಸಲೇಚಾ, ಧಮೇಂದ್ರಕುಮಾರ ಜೈನ, ಸಂತೋಷ ಪೋರವಾಲ, ಸಿಎ ರಾಜೇಶ ಮೆಹತಾ ಇವರು ಮಾತನಾಡಿದರು. ಜಿತೋ ಶೈಕ್ಷಣಿಕ ಸಾಲ ಸೌಲಭ್ಯ ಯೋಜನೆ ಕುರಿತು ಪುಷ್ಪಕ ಹನಮಣ್ಣವರ ಮಾಹಿತಿ ನೀಡಿದರು.
ಜಿತೋ ಬೆಳಗಾಂ ಚೇರಮನ್ ವೀರಧವಲ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಜೆ.ಎ.ಟಿ.ಎಫ್. ಬೆಳಗಾವಿ ವಿಭಾಗದ ಸಂಯೋಜಕ ಕುಂತಿನಾಥ ಕಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶೋಕ ಕಟಾರಿಯಾ ಅತಿಥಿಗಳನ್ನು ಪರಿಚಯಿಸಿದರು. ಸಂಯೋಜಕ ಭೂಷಣ ಮೊಹಿರೆ ವಂದಿಸಿದರು.
******************