ಬೆಳಗಾವಿ
ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿರುವ ಶೂನ್ಯ ಫಾಮ್೯ ರಿಟ್ರಿಟ್ ನಲ್ಲಿ ಡಾ. ಎ.ಜಿ.ತೆಂಡೂಲ್ಕರ್ ಸವಿನೆನಪಿಗಾಗಿ ಮೇಘ ಮಲ್ಹಾರಮ್ ಕ್ಲಾಸಿಕಲ್ ಹಿಂದೂಸ್ತಾನಿ ಸಂಗೀತ ಸ್ಪರ್ಧೆ ಆ.31ರಂದು ಸಂಜೆ 6ಕ್ಕೆ ಆಯೋಜಿಸಲಾಗಿದೆ ಎಂದು ಶೂನ್ಯ ಫಾಮ್೯ ರಿಟ್ರಿಟ್ ರಿಸಾಟ್೯ ಮಾಲೀಕರಾದ ಭಕ್ತಿವೇದಾ ತರಾಗೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ, ಗೋಕಾಕ, ಧಾರವಾಡ ಉತ್ತರ ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಿಂದ ಹಿಂದೂಸ್ತಾನಿ ಸಂಗೀತ ಗಾಯಕರು ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ. ಗ್ರಾಮೀಣ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಈ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಇದರ ಲಾಭವನ್ನು ಬೆಳಗಾವಿ ಜನರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಖ್ಯಾತ ಹಿಂದಿ ಗಾಯಕ ರೂಪ್ ಕುಮಾರ ರಾಠೋಡ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆಗಮಿಸಲಿದ್ದಾರೆ. ಕ್ಲಾಸಿಕಲ್ ಸಂಗೀತ ಕಾರ್ಯಕ್ರಮದಲ್ಲಿ ನುರಿತ ತಜ್ಞರು ಆಗಮಿಸಲಿದ್ದಾರೆ ಎಂದರು.
ಡಾ. ಯದೇಂದ್ರ ಪೂಜಾರಿ ಮಾತನಾಡಿ, ಬೆಳಗಾವಿಯಲ್ಲಿ ಕ್ಲಾಸಿಕಲ್ ಸಂಗೀತಗಾರರು ಸಾಕಷ್ಟು ಜನ ಇದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವ ಉದ್ದೇಶದಿಂದ ಈ ಸ್ಫರ್ದೆ ಆಯೋಜಿಸಲಾಗಿದೆ ಎಂದರು.
ಇಮ್ರಾನ್ ಮಕಾನದಾರ, ರೇಮೆ ರಾಮದಾಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.