ಏ.21 ರಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಆಚರಣೆ
ಬೆಳಗಾವಿ.ಏ.12: ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವವನ್ನು ಏಪ್ರಿಲ 21 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ. ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಮಧ್ಯವರ್ತಿ ಉತ್ಸವ ಸಮಿತಿ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ ಅವರು ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಬೆಳಗಾವಿಯಲ್ಲಿ ದಿಗಂಬರ ಮತ್ತು ಶ್ವೇತಾಂಬರ ಜೈನ ಸಮಾಜದವರು ಒಂದಾಗಿ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವವನ್ನು ಆಚರಿಸುತ್ತ ಬಂದಿದ್ಧಾರೆ. 25 ವರ್ಷಗಳ ಹಿಂದೆ ಅಂದಿನ ಆದಾಯ ತೆರಿಗೆ ಆಯುಕ್ತರಾದ ನರೇಂದ್ರ ಜೈನ ಅವರ ಮಾರ್ಗದರ್ಶನದಲ್ಲಿ ಈಉತ್ಸವ ಆರಂಭವಾಯಿತು. ಅಂದಿನಿAದ ಇಂದಿನವರೆಗೆ ಉತ್ಸವ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ಅವರು ತಿಳಿಸಿದರು.
ಜನ್ಮ ಕಲ್ಯಾಣಕ ಮಹೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರ ಏ.15 ರಂದು ಬೆಳಿಗ್ಗೆ 9 ಗಂಟೆಗೆ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಭೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಏ.16 ರಂದು ಮಹಾವೀರ ಭವನದಲ್ಲಿ ಬೆಳಿಗ್ಗೆ 10 ರಿಂದ ಮಧಾಹ್ನ 1 ಗಂಟೆಯವರೆಗೆ ಅರ್ಹಂ ವಿಜ್ಜಾ ಅಹಮದನಗರ ಮತ್ತು ಬೆಂಗಳೂರು ಅವರಿಂದ ಜೀವನ ಶೈಲಿ ಕುರಿತು ತರಬೇತಿ ಕಾರ್ಯಾಗಾರ ಸಾಯಂಕಾಲ 4 ಗಂಟೆಗೆ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.
ಬುಧವಾರ ಏ.17 ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಹಾವೀರ ಭವನದಲ್ಲಿ ವಸ್ತು ಪ್ರದರ್ಶನ , ಉದ್ಯೋಗಸ್ತ ಮಹಿಳೆಯರಿಗಾಗಿ ವ್ಯಾಪಾರ ಮಳಿಗೆ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ. ಅಂದು ಸಾಯಂಕಾಲ ಮಹಿಳೆಯರಿಗಾಗಿ ಗುಂಪು ಭಜನೆ , ಕಲರ್ಸ ಆಫ್ ಇಂಡಿಯಾ ಗ್ರುಪ್ ನೃತ್ಯ, ಪಾಕಕಲಾ ಸ್ಪರ್ಧೆ, ಸೀರೆ ವಿನ್ಯಾಸಗಳ ಸ್ಫರ್ಧೆ, ಮಕ್ಕಳಿಗಾಗಿ ಕಸದಿಂದ ರಸ ಸ್ಪರ್ಧೆ, ಸೂಪರ ಹೀರೋ ಸ್ಫರ್ಧೆಗಳು ನಡೆಯಲಿವೆ ಎಂದು ಅವರು ಹೇಳಿದರು.
ಗುರುವಾರ ಏ.18 ರಂದು ಸಾಯಂಕಾಲ 6 ಗಂಟೆಯಿAದ 9 ಗಂಟೆಯವರೆಗೆ ಮಕ್ಕಳ ಜಿನ ಭಜನಾ ಸ್ಪರ್ಧೆ, ಮಹಿಳೆಯರಿಗೆ ನೃತ್ಯ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ. ಶುಕ್ರವಾರ ಏ. 19 ರಂದು ಸಾಯಂಕಾಲ 6 ರಿಂದ 9 ಗಂಟೆಯವರೆಗೆ “ ಬ್ರಾಹ್ಮಿ ಇಂದ ಗೊಮ್ಮಟನವರೆಗೆ “ ನಾಟಕ ನಡೆಯಲಿದೆ ಎಂದು ಅವರು ತಿಳಿಸಿದರು.
ಏ. 21 ರವಿವಾರದಂದು ಶೋಭಾಯಾತ್ರೆ ನಡೆಯಲಿದೆ. ಅಂದು ಬೆಳಿಗ್ಗೆ 8 -5 ಘಂಟೆಗೆ ಜೈನ ಯುವ ಸಂಘಟನೆ ವತಿಯಿಂದ ಬೃಹತ್ ಬೈಕ ರ‍್ಯಾಲಿ ನಡೆಸಲಾಗುವುದು.ತದನಂತರ ಸಮಾದೇವಿ ಗಲ್ಲಿ ಖಡೆಬಜಾರದಿಂದ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು.
ಸಮಾರಂಭಕ್ಕೆ ಮುಖ್ಯ ಅತಥಿಯಾಗಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೋ. ಸಿ.ಎಂ . ತ್ಯಾಗರಾಜ ಹಾಗೂ ಗೌರವ ಅತಿಥಿ ಪದ್ಮಶ್ರೀ ಪ್ರೋ.ಡಾ. ಮದನ ಎಂ ಗೋಡಬೊಲೆ ಇವರು ಆಗಮಿಸಲಿದ್ದಾರೆ. ಶೋಭಾ ಯಾತ್ರೆ ರಾಮದೇವ ಗಲ್ಲಿ, ರಾಮಲಿಂಗಖಿAಡ ಗಲ್ಲಿ, ಟಿಳಕಚೌಕ, ಶೇರಿ ಗಲ್ಲಿ, ಶನಿ ಮಂದಿರ, ಎಸ್.ಪಿ.ಎಂ.ರೋಡ, ಕೋರೆ ಗಲ್ಲಿ ಶಹಾಪೂರ, ಹಾಗೂ ಬಸವೇಶ್ವರ ವೃತ್ತದ ಮುಖಾಂತರ ಮಹಾವೀರ ಭವನ ತಲುಪಿ ಶೋಭಾಯಾತ್ರೆ ಮುಕ್ತಾಯಗೊಳ್ಳುವುದು. ,ಮಹಾವೀರ ಭವನದಲ್ಲಿ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿನೋದ ದೊಡ್ಡಣ್ಣವರ, ರಾಜೇಂದ್ರ ಜಕ್ಕನ್ನವರ, ಸಾಗರ ಬೋರಗಲ್ಲ, ರಾಜು ಖೋಡಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.