“ವರಸಿದ್ಧಿ ಶ್ರೀ ಪಾರ್ಶ್ವನಾಥ ತೀರ್ಥಂಕರ ಸ್ಥಾಪನಾ ದಿನೋತ್ಸವ ಸಂಪನ್ನ”
ಬೆಳಗಾವಿ: ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ತಾಲೂಕಿನ ಕಸಮಳಗಿ ಗ್ರಾಮದ ವರಸಿದ್ಧಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಬಸದಿಯಲ್ಲಿ ಮರು ಸ್ಥಾಪನೆ ದಿನದ ಉತ್ಸವ, ನವಗ್ರಹ ದೋಷ ನಿವಾರಕ , ಸರ್ವ ಕಾರ್ಯ ಸಿದ್ದಿ ವಿಧಾನ, ಅಭಿಷೇಕ, ಆರಾಧನೆ ,ವಿಧಿ ವಿಧಾನಗಳು ಎಲ್ಲಾ ಭಟ್ಟರಕ ಶ್ರೀಗಳವರ ಆಶೀರ್ವಾದ ಹಾಗೂ ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಸಂಪನ್ನ ಗೊಂಡಿತು.
ಮಾಜಿ ಶಾಸಕ ಸಂಜಯ್ ಪಾಟೀಲ್ ಧಾರ್ಮಿಕ ವಿಧಿ ವಿಧಾನಗಳು ಕುರಿತು ಮಾತನಾಡಿದರು.
ಅರ್ಚಕರಾಗಿ ಸುಯೋಗ ಉಪಾಧ್ಯ, ಸ್ಥಾನಿಕ ಪಂಡಿತ ಚಂದನ್ ಉಪಾದ್ಯ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜೇಂದ್ರ ಜಕ್ಕಣ್ಣನವರ್ ,ಅಭಯ ಅವಲಕ್ಕಿ, ವಕೀಲ ರವಿರಾಜ್ ಪಾಟೀಲ್ ,ಅಶೋಕ್ ಪಾಟೀಲ್, ವೈಭವ ಬುಡಾಳಿ ಸನ್ಮತಿ ಕಸ್ತೂರಿ ,ಪ್ರಮೋದ ಪಾಟೀಲ್ ,ಅಭಿನಂದನ್ ಕೋಚ್ರಿ, ಮಲ್ಲಪ್ಪ ಮಡೆವ, ಡಿ .ಡಿ .ಪಾಟೀಲ್ , ಪಾಟ ಸ್ ಬಡಸದ, ತವನಪ್ಪ ಕಡಬಿ, ಸಂತೋಷ್ ಪಾಟೀಲ್ ,ಪತ್ರಕರ್ತ ಕಲ್ಲಪ್ಪ ಅಗಸಿ ಮನೆ, ಭರತೇಶ್ ಗೌಡರ ದೇವು ಗೌಡರ, ಕಮಿಟಿಯ ಸದಸ್ಯರುಗಳು ಸುತ್ತಮುತ್ತಲ ಗ್ರಾಮಸ್ಥರು ಜೈನ ಶ್ರಾವಕ ,ಶ್ರಾವಕಿಯರು ಉಪಸ್ಥಿತರಿದ್ದರು.