ಲೋಕಸಭಾ ಚುನಾವಣೆ; ಜಪ್ತಿಯಾದ ನಗದು ಬಿಡುಗಡೆಗೆ ಸಮಿತಿ ರಚನೆ

Kuntinath
WhatsApp Group Join Now
Telegram Group Join Now

ಲೋಕಸಭಾ ಚುನಾವಣೆ; ಜಪ್ತಿಯಾದ ನಗದು ಬಿಡುಗಡೆಗೆ ಸಮಿತಿ ರಚನೆ

ಬೆಳಗಾವಿ,: ಸಾರ್ವತ್ರಿಕ ಲೋಕಸಭಾ ಚುನಾವಣಾ 2024ರ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ವ್ಯಕ್ತಿಯು ರೂ.50,000 ಮೇಲ್ಪಟ್ಟು ನಗದು ಮೊತ್ತವನ್ನು ಯಾವುದೇ ದಾಖಲೆಗಳಿಲ್ಲದೇ ತೆಗೆದುಕೊಂಡು ಹೋಗುತ್ತಿದ್ದಲ್ಲಿ, ಸದರಿ ಮೊತ್ತವು ಚುನಾವಣಾ FST/ SST ಯವರಿಂದ ಜಪ್ತಿಯಾದ ಸಂದರ್ಭದಲ್ಲಿ ಅಂತಹ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸಲು ಕ್ಯಾಶ್ ರಿಲೀಸ್ ಕಮಿಟಿ ರಚಿಸಲಾಗಿರುತ್ತದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ಯಾಶ್ ರಿಲೀಸ್ ಕಮೀಟಿ ಅಧ್ಯಕ್ಷರಾಗಿರುತ್ತಾರೆ.

ಗೌರಿಶಂಕರ ಕಡೇಚೂರ(ಮೊಬೈಲ್-9560273950) ಅವರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿದ್ದು, ದಾಖಲೆ ಹಾಜರುಪಡಿಸಿ ನಗದು ಮೊತ್ತದ ಬಿಡುಗಡೆಗಾಗಿ ಇವರ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

FST/ SST ತಂಡದವರು ನಗದು ಮೊತ್ತ ಜಪ್ತಿ ಮಾಡಿದ‌ ಬಳಿಕ ಸಾರ್ವಜನಿಕರು ಸೂಕ್ತ ದಾಖಲೆ ಸಲ್ಲಿಸಿ ನಗದು ಮೊತ್ತವನ್ನು ಹಿಂಪಡೆದುಕೊಳ್ಳಬಹುದು ಎಂದು ಜಿಲ್ಲಾ ನೋಡಲ್ ಅಧಿಕಾರಿಗಳು, ಚುನಾವಣಾ ವೆಚ್ಚ ಮೇಲ್ವಿಚಾರಣೆ ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕ್ಯಾಶ್ ರಿಲೀಸ್ ಕಮಿಟಿ ಹಾಗೂ ಕಾಡಾ ಮುಖ್ಯ ಲೆಕ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****

WhatsApp Group Join Now
Telegram Group Join Now
Share This Article