ಬ್ಯಾಂಕ ಆಫ್ ಇಂಡಿಯಾ ವತಿಯಿಂದ ಭರತೇಶ ಆಸ್ಪತ್ರೆಗೆ ಅಂಬ್ಯುಲೆನ್ಸ್ ಕೊಡುಗೆ

Kuntinath
WhatsApp Group Join Now
Telegram Group Join Now

ಬ್ಯಾಂಕ ಆಫ್ ಇಂಡಿಯಾ ವತಿಯಿಂದ ಭರತೇಶ ಆಸ್ಪತ್ರೆಗೆ ಅಂಬ್ಯುಲೆನ್ಸ್ ಕೊಡುಗೆ

(ಫೋಟೊ ಕ್ಯಾಪ್ಶನ್: 001: ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ-ಧಾರವಾಡ ವಲಯ ಪ್ರಬಂಧಕ ವಿ.ವಿ.ಕೃಷ್ಣಕಿಶೋರ ಅವರು ಸುಸಜ್ಜಿತ ಅಂಬ್ಯುಲೆನ್ಸವನ್ನು ಭರತೇಶ ಆಸ್ಪತ್ರೆಗೆ ಹಸ್ತಾಂತರಿಸಿದರು.ವಿನೋದ ದೊಡ್ಡಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.)

ಬೆಳಗಾವಿ.ಮೇ26: ಇಲ್ಲಿಯ ಬ್ಯಾಂಕ ಆಫ್ ಇಂಡಿಯಾ ವತಿಯಿಂದ ಕಾರ್ಪೋರೇಟ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಆಸ್ಪತ್ರೆಗೆ ಸುಸಜ್ಜಿತವಾದ ಅಂಬ್ಯುಲೆನ್ಸವನ್ನು ಕೊಡುಗೆಯಾಗಿ ನೀಡಲಾಯಿತು.
ಇತ್ತಿಚಿಗೆ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ-ಧಾರವಾಡ ವಲಯ ಪ್ರಬಂಧಕ ವಿ.ವಿ.ಕೃಷ್ಣಕಿಶೋರ ಅವರು ಸುಸಜ್ಜಿತ ಅಂಬ್ಯುಲೆನ್ಸವನ್ನು ಭರತೇಶ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಕೀಶೋರ ಅವರು, ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಹಾಗೂ ಕಾರ್ಪೋರೇಟ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಅಂಬ್ಯುಲೇನ್ಸವನ್ನು ಭರತೇಶ ಆಸ್ಪತ್ರೆಗೆ ಹಸ್ತಾಂತರಿಸಲಾಗುತ್ತಿದೆ. ಇದೇ ರೀತಿ ಇನ್ನೂ ಹೆಚ್ಚನ ಕಾರ್ಯವನ್ನು ಬ್ಯಾಂಕ ಆಫ್ ಇಂಡಿಯಾ ಕೈಗೊಂಡಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ, ಬ್ಯಾಂಕ್ ಆಫ್ ಇಂಡಿಯಾ ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಯಾಗಿದ್ದು, ಬ್ಯಾಂಕ್ ನೀಡಿದ ಸೇವೆ ಅವಿಸ್ಮರಣೀಯವಾಗಿದೆ. ಇದೀಗ ಬ್ಯಾಂಕ ವತಿಯಿಂದ ಅಂಬ್ಯುಲೆನ್ಸ ನೀಡಿದ್ದು ಭರತೇಶ ಶಿಕ್ಷಣ ಸಂಸ್ಥೆಯು ಅವರಿಗೆ ಋಣಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಬೆಳಗಾವಿ ಶಾಖೆಯ ಪ್ರಬಂಧಕ ಸುನಿಲ ಪಿ. ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ,ಡಾ.ರಮೇಶ ದೊಡ್ಡಣ್ಣವರ, ಡಾ.ಶ್ರೀಕಾಂತ ಕೊಂಕಣಿ, ಭೂಷಣ ಮಿರ್ಜಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
*******

WhatsApp Group Join Now
Telegram Group Join Now
Share This Article