ಮೆಕಳಿ ಗ್ರಾಮದ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

Kuntinath
ಮೆಕಳಿ ಗ್ರಾಮದ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
WhatsApp Group Join Now
Telegram Group Join Now

ಮೆಕಳಿ ಗ್ರಾಮದ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಚಿಕ್ಕೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯನ್ನು ಮೆಚ್ಚಿ ಇಂದು ಮೆಕಳಿ ಗ್ರಾಮದ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಸಂತಸ ತಂದಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಚಿಕ್ಕೋಡಿಯ ಕವಟಗಿಮಠ ನಗರದ ಸ್ವಗೃಹದಲ್ಲಿ ರಾಯಬಾಗ ತಾಲೂಕಿನ ಮೆಕಳಿ ಗ್ರಾಮದ 15ಕ್ಕೂ ಹೆಚ್ಚು ಜನರಿಗೆ ಶಾಲು ಹೊದಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

ರಾಯಬಾಗ ತಾಲೂಕಿನ ಮೆಕಳಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದದ್ದು ಖುಷಿ ತಂದಿದೆ. ಕಾಂಗ್ರೆಸ್ ಗೆ ಸೇರ್ಪಡೆಯಾದ ನೂನತ ಕಾರ್ಯಕರ್ತರು
ಇಂದಿನಿಂದಲೇ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ, ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಬಹು ಅಂತರದಿಂದ ಗೆಲ್ಲಿಸಬೇಕೆಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಆನಂದ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಮೆಕಳಿ ಗ್ರಾಮಸ್ಥರು ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿದ್ದೇವು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ಇಂದಿನಿಂದಲೇ ನಾವು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ನಾಯಕ, ಬಸಪ್ಪ ಕಾಂಬಳೆ, ಮಾರುತಿ ಬಟನೂರೆ, ಸದಾಶಿವ ಕಾಂಬಳೆ, ರಾಜು ಕಾಂಬಳೆ, ಮಹಾದೇವ ಕಾಂಬಳೆ, ಪರಶುರಾಮ ಕಾಂಬಳೆ, ಅರುಣ ಕಾಂಬಳೆ, ಶಿವಾನಂದ ಕಾಂಬಳೆ, ರಾಮು ಕೊಟ್ಟರೆ, ದರ್ಶನ ಕೋತ, ಮಹಾದೇವ ಜತರಾಟೆ, ಗಜಾನನ ಕಡ್ಯಾಗೋಳ, ಕೆಂಪಣ್ಣ ನಾಯಿಕ, ಕುಮಾರ ನಾಯಿಕ, ಸಿದ್ದನಾಯಿಕ, ಪ್ರದೀಪ ನಾಯಕ, ಮುತ್ತಪ್ಪ ದೇಸಾಯಿ, ಕಾಡಪ್ಪ ನಾಯಕ, ಮಂಜು ಕುದರೆ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

WhatsApp Group Join Now
Telegram Group Join Now
Share This Article