ಜಿನ ಸಮ್ಮಿಲನ 2024
ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಉದ್ಘಾಟನೆ
ಬೆಂಗಳೂರು
ಬೆಂಗಳೂರಿನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಭಾರತೀಯ ಜೈನ್ ಮಿಲನ್ ವಲಯ – 8. ಸುಹಾಸ್ತಿ ಯುವ. ಜೈನ್ ಮಿಲನ್ ಬೆಂಗಳೂರು ,ಇವರು ವತಿಯಿಂದ ನಡೆದ ಜಿನ ಸಮ್ಮಿಲನ 2024ರ ಕ್ರೀಡಾ ದಿನದ ಅಂಗವಾಗಿ ನಡೆದ ಥ್ರೋ ಬಾಲ್ ಪಂದ್ಯಾವಳಿಗೆ ರತ್ನತ್ರೆಯ ಕ್ರಿಯೇಷನ್ ನಿರ್ಮಾಪಕ್ಷಿ. ಡಾ. ನೀರಜಾ ನಾಗೇಂದ್ರ ಕುಮಾರ್ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷ ಪದ್ಮಿನಿ ಪದ್ಮರಾಜ್ ,ಮೆಂಟರ್ ಯುವ ಜೈನ್ ಮಿಲನ ಪಿ. ಅಜಿತ್ ಕುಮಾರ್ ,ಸಮಾಜ ಸಂಘಟಕಿ ಪ್ರೇಮಾ ಸುಖಾನಂದ, ಭಾರತೀಯ ಜೈನ್ ಮಿನನ್ ವಲಯ – 8 ಜಂಟಿ ಕಾರ್ಯದರ್ಶಿ ಸುಖಾನಂದ , ಎಂ .ಎಂ .ಜಿನೇಂದ್ರ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷ ವಜ್ರ ಕುಮಾರ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು..
ಕಾರ್ಯಕ್ರಮದಲ್ಲಿ ಸುಹಾಸ್ತಿ ಯುವ ಜೈನ್ ಮಿಲನ ಕಾರ್ಯದರ್ಶಿ ಅಭಿನಂದನ್ ಜೈನ ಬಿದುರೂರು ,ಸಹ ಕಾರ್ಯದರ್ಶಿ. ಜೆ .ಪ್ರಜ್ವಲ್ ಜೈನ್, ಖಜಾಂಚಿ ತೇಜಪ್ಪ ಜೈನ್, ನಿರ್ದೇಶಕರು ಹಾಗೂ ಸರ್ವ ಸದಸ್ಯರುಗಳು ಭಾಗವಹಿಸಿದ್ದರು
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಸಿದ್ಧರ್ಶಿ ತಂಡ , ಬೆಂಗಳೂರಿನ ಫಾಲ್ಕನ್ ತಂಡ , ಅತ್ತಿಮಬ್ಬೆ ತಂಡ, ಕಾರ್ಕಳ ತಂಡ, ಬಾಲ್ ಬಾಸ್ಟರ್ನ್ ತಂಡ ಬೆಂಗಳೂರು, ಯಂಗ್ ಲೇಡಿಸ್ ತಂಡ ಬೆಂಗಳೂರು , ಹಾಗೂ ಸುಹಾಸ್ತಿ ತಂಡ ಸೇರಿದಂತೆ 7 ತಂಡಗಳ ಭಾಗವಹಿಸಿದ್ದವು.
ಜೆ .ರಂಗನಾಥ . ತುಮಕೂರು.