ಹುಬ್ಬಳ್ಳಿ:ಗೋದ್ರೇಜ್ ಕ್ಯಾಪಿಟಲ್, ಡೈರಿ ಫಾರ್ಮ್ ಸಾಲಗಳನ್ನು ನೀಡಲು ಆರಂಭ ಮಾಡುವ ಮೂಲಕ ಕೃಷಿ ವಿಭಾಗಕ್ಕೆ ಪ್ರವೇಶಿಸಿದೆ. ಕ್ರೀಮ್‌ಲೈನ್ ಡೈರಿ ಪ್ರಾಡಕ್ಟ್ಸ್ ಲಿಮಿಟೆಡ್ ಮತ್ತು ದ್ವಾರ ಇ-ಡೈರಿ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಗೋದ್ರೇಜ್ ಕ್ಯಾಪಿಟಲ್ ಕರ್ನಾಟಕ ಮತ್ತು ಇತರ ಪ್ರದೇಶಗಳಲ್ಲಿ ಇರುವ ಸಣ್ಣ ಡೈರಿ ಫಾರ್ಮ್ ಮಾಲೀಕರಿಗೆ ಹಣಕಾಸಿನ ನೆರವು ನೀಡಲಿದೆ. ಕ್ರೀಮ್‌ಲೈನ್ ಡೈರಿ ಪ್ರಾಡಕ್ಟ್ಸ್ ಲಿಮಿಟೆಡ್ ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪ್‌ನ ವೈವಿಧ್ಯಮಯ ಆಹಾರ ಮತ್ತು ಕೃಷಿ- ವ್ಯಾಪಾರ ಸಂಘಟಿತ ಸಂಸ್ಥೆಯಾದ ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ (ಜಿಎವಿಎಲ್)ನ ಅಂಗಸಂಸ್ಥೆಯಾಗಿದೆ ಮತ್ತು ಗೋದ್ರೇಜ್ ಜೆರ್ಸಿ ಬ್ರಾಂಡ್ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ಭಾರತದಲ್ಲಿ ಡೈರಿ ಉತ್ಪನ್ನಗಳ ಬಳಕೆಯಲ್ಲಿ ಸ್ಥಿರವಾದ ಹೆಚ್ಚಳ ಕಾಣುತ್ತಿದೆ. ಅದರಿಂದ ಡೈರಿ ರೈತರಿಗೆ ಇರುವ ಅವಕಾಶಗಳು ಮತ್ತು ಸವಾಲುಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಉಂಟಾಗುತ್ತಿದೆ. ಗೋದ್ರೇಜ್ ಕ್ಯಾಪಿಟಲ್ ಈ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಿಸಲು ಮತ್ತು ಆರ್ಥಿಕ ಸಮೃದ್ಧಿ ಜಾಸ್ತಿ ಮಾಡಲು ಹಣಕಾಸು ನೆರವನ್ನು ಒದಗಿಸಿ ಈ ರೈತರ ಸಬಲೀಕರಣ ಮಾಡಲು ಮುಂದಾಗಿದೆ. ಈ ಉಪಕ್ರಮಕ್ಕೆ ಪೂರಕವಾಗಿ ರೈತರಿಗೆ ಸೌಲಭ್ಯ ಸಿಗುವುದು ಸುಲಭ ಮಾಡಲು ಗೋದ್ರೇಜ್ ಕ್ಯಾಪಿಟಲ್ ಸಂಸ್ಥೆಯು ದ್ವಾರ ಇ-ಡೈರಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.
ಡೈರಿ ಫಾರ್ಮ್ ಸಾಲಗಳನ್ನು ಒದಗಿಸುವುದರ ಜೊತೆ ಗೋದ್ರೇಜ್ ಕ್ಯಾಪಿಟಲ್ ಸಂಸ್ಥೆಯು ಜಿಎವಿಎಲ್ ನಲ್ಲಿ ಹೆಸರು ನೋಂದಾಯಿಸಿರುವ ರೈತರಿಗೆ ಜಾನುವಾರುಗಳ ಖರೀದಿ ಮತ್ತು ನಿರ್ವಹಣೆಗಾಗಿ ಜಾಮೀನು- ಮುಕ್ತ ಸಾಲ ಒದಗಿಸಲಿದೆ. ಈ ಸಾಲ ಸೌಲಭ್ಯದಿಂದಾಗಿ ಡೈರಿ ಫಾರ್ಮ್ ಮಾಲೀಕರು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ, ತ್ವರಿತ ಮಂಜೂರಾತಿ ಮತ್ತು ವಿತರಣೆ ಹಾಗೂ ಎರಡು ವರ್ಷಗಳವರೆಗಿನ ಹೊಂದಿಕೊಳ್ಳುವ ಮಾದರಿಯ ಮರುಪಾವತಿ ಆಯ್ಕೆಗಳನ್ನು ಪಡೆಯುತ್ತಾರೆ.
ಈ ಕುರಿತು ಮಾತನಾಡಿದ ಗೋದ್ರೇಜ್ ಕ್ಯಾಪಿಟಲ್ನ ಎಂಡಿ ಮತ್ತು ಸಿಇಒ ಮನೀಶ್ ಶಾ, “ನಮ್ಮ ದೇಶದ ರೈತರಿಗೆ ನಮ್ಮ ಬೆಂಬಲ ಒದಗಿಸಲು ನಾವು ಹೆಮ್ಮೆ ಪಡುತ್ತೇವೆ. ಹೈನುಗಾರಿಕೆ ಸಮುದಾಯಕ್ಕೆ ಹಣಕಾಸಿನ ನೆರವು ನೀಡುವ ತುರ್ತು ಅಗತ್ಯ ಮನಗಂಡು ಈ ಉದ್ಯಮ ಪ್ರಾರಂಭಿಸುವ ನಿರ್ಧಾರ ಮಾಡಿದ್ದೇವೆ. ಮೊತ್ತ ಮೊದಲನೆಯದಾಗಿ ಕೃಷ್ಣಗಿರಿ ಜಿಲ್ಲೆಯಲ್ಲಿ ಸಾಲ ಒದಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಮೂಲಕ ನಾವು ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಡೈರಿ ಉದ್ಯಮವನ್ನು ಕ್ರಿಯಾಶೀಲವಾಗಿ ಮುನ್ನಡೆಸಲು ನೆರವಾಗಲು ಪ್ರಯತ್ನಿಸುತ್ತೇವೆ ಮತ್ತು ಇದರ ಜೊತೆಗೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ ರೈತರಿಗೂ ನಮ್ಮ ಬೆಂಬಲ ನೀಡುತ್ತೇವೆ ಎಂದರು.
ಡೈರಿ ಕ್ಷೇತ್ರವು 8 ಕೋಟಿ ರೈತರಿಗೆ ಜೀವನೋಪಾಯ ಒದಗಿಸಿದೆ. ಜಾನುವಾರುಗಳಿಗೆ ಉತ್ತಮ ಆಹಾರ ಒದಗಿಸುವಿಕೆಯು ಆರೋಗ್ಯಕರ ಹೈನುಗಾರಿಕೆಯ ಏಕೈಕ ಮತ್ತು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಈ ಪ್ರಕ್ರಿಯೆಯು ಹಾಲಿನ ಒಟ್ಟು ವೆಚ್ಚದ 70%ನಷ್ಟು ಪಾಲನ್ನು ಹೊಂದಿದೆ.
ಡೈರಿಯ ಸಂಸ್ಥಾಪಕ, ಎಂಡಿ ಮತ್ತು ಸಿಇಒ ರವಿ ಕೆ.ಎ. ಮಾತನಾಡಿ, “ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪ್ ಕಂಪನಿಗಳ ಜೊತೆಗೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ. ಈ ಪಾಲುದಾರಿಕೆ ಮೂಲಕ ಸಾವಿರಾರು ಡೈರಿ ರೈತರು ಗೋದ್ರೇಜ್ ಕ್ಯಾಪಿಟಲ್ ನಿಂದ ಹಣಕಾಸು ನೆರವು ಪಡೆಯಲು ಸಾಧ್ಯ ಆಗುತ್ತದೆ ಎಂದು ಹೇಳಿದರು.