ಜೈನ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಕ್ರಮ – ಡಿ.ಕೆ.ಶಿವಕುಮಾರ

Kuntinath
By Kuntinath
ಜೈನ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಕ್ರಮ – ಡಿ.ಕೆ.ಶಿವಕುಮಾರ
WhatsApp Group Join Now
Telegram Group Join Now

ಜೈನ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಕ್ರಮ – ಡಿ.ಕೆ.ಶಿವಕುಮಾರ
ಬೆಳಗಾವಿ ;ಜೈನ ಸಮಾಜದ ಬೇಡಿಕೆಗಳ ಈಡೇರಿಕೆಗೆ ಸರಕಾರದ ವತಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು
ಉಪ ಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರು ಹೇಳಿದರು.

ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಆಚಾರ್ಯ ಶ್ರೀ ಗುಣಧರನಂದಿ ಮುನಿ ಮಹಾರಾಜರ ಮುಂದಾಳತ್ವದಲ್ಲಿ ಜೈನ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಡೆಸಲಾದ ಜೈನ ಸಮಾವೇಶದಲ್ಲಿ ಸಮಾಜದ. ವತಿಯಿಂದ ಮನವಿ ‌ಸ್ವೀಕರಿಸಿ ಮಾತನಾಡುತ್ತಿದ್ದರು.

ಎಲ್ಲ ಧರ್ಮಗಳು ಶ್ರೇಷ್ಠವಾಗಿವೆ. ಅದರಲ್ಲೂ ಮಾನವ ಧರ್ಮ ಅತೀ ಶ್ರೇಷ್ಠ ವಾಗಿದೆ. ಈ ಸರಕಾರದಲ್ಲಿ ಡಿ.ಕೆ. ಶಿವಕುಮಾರ ಇದ್ದಾನೆ. ನನ್ನ ಮೇಲೆ ಭರವಸೆ ಇಡಿ. ನಮ್ಮ ಕಾಂಗ್ರೆಸ ಸರಕಾರ ಜೈನ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಸ್ಥಾನ ಮಾನ ನೀಡಿದೆ‌. ಅದರಂತೆ ಈಗ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ ಹಾಗೆ ಜೈನ ಸಮುದಾಯದ ಎಲ್ಲ ಬೇಡಿಕೆಗಳ ಈಡೆರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಜೈನ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಪ್ರಸ್ತುತ ಜೈನ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ದವಾಗಿದೆ. ಬಹುದಿನಗಳ ಬೇಡಿಕೆಯನ್ನು ಈಡೆರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ, ಜೈನ ಸಮಾಜದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳ ಹಾಗೂ ಸಚಿವರೊಂದಿಗೆ ಚರ್ಚೆ ಮಾಡಿ ಎಲ್ಲ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯಂದ್ರ ಅವರು ಮಾತನಾಡಿ, ಜೈನ ಸಮಾಜದ ಬೇಡಿಕೆಗಳ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಜೈನ ಸಮಾಜದ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದು ಹೇಳಿದರು.
ಶಾಸಕ ಪ್ರಕಾಶ ಹುಕ್ಕೇರಿ ಅವರು ಮಾತನಾಡಿ, ಚಿಕ್ಕೋಡಿ ಮತಕ್ಷೇತ್ರದಲ್ಲಿ ಈಗಾಗಲೆ ಪ್ರತ್ಯೇಕ ವಸತಿ ನಿಲಯಗಳನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಶೀಘ್ರದಲ್ಲೇ ಶಿಲಾನ್ಯಾಸ ಮಾಡಲಾಗುವುದು ಎಂದು ಹೇಳಿದ ಅವರು ಉಳಿದ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಶಾಸಕ ಅಭಯ ಪಾಟೀಲ, ರಾಜು ಸೇಠ, ಶಾಸಕ ಬಾಬಾಸಾಹೇಬ ಪಾಟೀಲ,
ಸಚಿವ ಡಿ.ಸುಧಾಕರ,
ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಲ, ಶಾಸಕ ಸಿದ್ದು ಸವದಿ, ಮೊದಲಾದವರು ಮಾತನಾಡಿದರು.
ವಿಧಾನ ಪರಿಷತ ಸದಸ್ಯ ಚನ್ನಿರಾಜ ಹಟ್ಟಿಹೋಳಿ,
ನ್ಯಾಯವಾದಿ ರವಿರಾಜ ಪಾಟೀಲ, ಜೈನ ಸಮಾಜದ ಮುಖಂಡ ಉತ್ತಮ ಪಾಟೀಲ, ಮೊದಲಾದವರು ಮಾತನಾಡಿದರು.
ಜೈನ‌ ಸಮಾಜದ ಮುಖಂಡರಾದ ವಿನೋದ ದೊಡ್ಡಣ್ಣವರ, ಸುನಿಲ ಹನಮಣ್ಣವರ,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದ ಸಾನಿಧ್ಯವನ್ನು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ವಹಿಸಿ ನಮ್ಮ ಬೇಡಿಕೆಗಳು ಈಡೇರಲೇಬೇಕು.
ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆಯನ್ನು ಕೊಡಲೇಬಾರದು‌ ನಮ್ಮ ಧರ್ಮ ಪರಿಪಾಲನೆ ಮಾಡಲು ಅನಕೂಲ ಮಾಡಿ‌ಕೊಡಿ , ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಬೇಕೆಂದು ಹೇಳಿದರು.

ಸಮಾರಂಭದ ವೇದಿಕೆ ಮೇಲೆ ಮೂಡಬಿದರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಮಠದ ದೇವೆಂದ್ರಕೀರ್ತೀ ಭಟ್ಟಾರಕ ಸ್ವಾಮೀಜಿ,
ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ , ನಾಂದನಿ ಮಠದ ಜಿನಸೇನ ಭಟ್ಟಾರಕ ಸ್ವಾಮಿಜಿ, ಸೋಂದಾ ಮಠದ ಭಟ್ಟಾಕಲಂಕ‌ ಸ್ವಾಮೀಜಿಗಳು ಮಾತನಾಡಿದರು

WhatsApp Group Join Now
Telegram Group Join Now
Share This Article