ಮುನಿಗಳ ಬೆಂಗಳೂರು ಪುರ ಪ್ರವೇಶ ಭವ್ಯ ಸ್ವಾಗತ”

Kuntinath
WhatsApp Group Join Now
Telegram Group Join Now

“ಮುನಿಗಳ ಬೆಂಗಳೂರು ಪುರ ಪ್ರವೇಶ ಭವ್ಯ ಸ್ವಾಗತ”

ಬೆಂಗಳೂರು

ಆಚಾರ್ಯ ಪ್ರಸನ್ನ ಸಾಗರ್ ಜಿ .ಮಹಾರಾಜ್ ಹಾಗೂ ಪಿಯೂಷ್ ಸಾಗರ್ ಜಿ .ಮಹಾರಾಜರವರ ಸಂಘ ಪರಿವಾರ ಬೆಂಗಳೂರು ನಗರ ಪುರ ಪ್ರವೇಶಕ್ಕೆ ಪೂರ್ಣ ಕುಂಭ ದೊಂದಿಗೆ ಭವ್ಯ ಸ್ವಾಗತ ನೀಡಲಾಯಿತು.

ಕರ್ನಾಟಕl ಜೈನ ಮಹಿಳಾ ಒಕ್ಕೂಟ ಅಧ್ಯಕ್ಷ ಪದ್ಮಿನಿ ಪದ್ಮರಾಜ್, ಬೆಂಗಳೂರು ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷ ನಾಗಶ್ರೀ ಮುಪ್ಪಾಣೆ ಹಾಗೂ ರತ್ನತ್ರಯ ಧಾರವಾಹಿಯ ನೀರಜಾ ನಾಗೇಂದ್ರ ಕುಮಾರ್ ನೇತೃತ್ವದಲ್ಲಿ ಮಹಿಳಾ ತಂಡಗಳು ಕಳಸಗಳ ಪೂರ್ಣ ಕುಂಭದೊಂದಿಗೆ ಭವ್ಯ ಸ್ವಾಗತ ನೀಡಿದರು.

ಬೆಳಗ್ಗೆ ಜಿನಾ ಶಾಸ್ತ್ರ ಪೂಜೆ, ಸಂಜೆ ಗುರು ಪೂಜೆ ,ಪ್ರತಿ ಕ್ರಮಣ, ಆನಂದ ಯಾತ್ರೆ, ಗುರು ಭಕ್ತಿ ಮತ್ತು ಆರತಿ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಕಲ ದಿಗಂಬರ ಜೈನ ಸಮಾಜ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಹಾಗೂ ನಿರ್ದೇಶಕರುಗಳು ,,ಆಡಳಿತ ಮಂಡಳಿಯ ಸದಸ್ಯರು ,ಪದಾಧಿಕಾರಿಗಳು,

ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ್ ,ನಿರ್ದೇಶಕರು, ಆಡಳಿತ ಮಂಡಳಿಯ ಸದಸ್ಯರುಗಳು,

ಬೆಂಗಳೂರು ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷ ನಾಗಶ್ರೀ ಮುಪ್ಪಾಣಿ ಆಡಳಿತ ಮಂಡಳಿ ಸದಸ್ಯರು ನಿರ್ದೇಶಕರುಗಳು ಪದಾಧಿಕಾರಿಗಳು ಸದಸ್ಯರು..

ಚಂದನ ಟಿ .ವಿ . ರತ್ನತ್ರೆಯ ಧಾರಾವಾಹಿಯ ನಿರ್ದೇಶಕಿ ನೀರಜಾ ನಾಗೇಂದ್ರ ಕುಮಾರ್ ಹಾಗೂ ತಂಡ

ಬೆಂಗಳೂರು ನಗರದ ಜಿನಬಂದುಗಳು ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ವಿವಿಧ ಸಮಿತಿಗಳ ಸದಸ್ಯರು ,ಜೈನ ಮುಖಂಡರುಗಳು ಸೇರಿದಂತೆ ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು.

 

ಕಾರ್ಯಕ್ರಮದಲ್ಲಿ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

WhatsApp Group Join Now
Telegram Group Join Now
Share This Article