ʻದೃಢ ಮತದಾನ, ಸದೃಢ ದೇಶʼ: ಬಂಗೂರ ಸಿಮೆಂಟ ಅಭಿಯಾನ

Kuntinath
WhatsApp Group Join Now
Telegram Group Join Now

Belagavi : ದೇಶದ ನಾಗರಿಕರು ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಸ್ಫೂರ್ತಿ ನೀಡುವ ಉದ್ದೇಶದಿಂದ ಬಂಗೂರ್‌ ಸಿಮೆಂಟ್‌ ಒಂದು ಮಲ್ಟಿಮೀಡಿಯಾ ಅಭಿಯಾನವನ್ನು ಅನಾವರಣಗೊಳಿಸಿದೆ. ʻದೃಢ ಮತದಾನಸದೃಢ ದೇಶʼ (ವೋಟ್‌ ಸಾಲಿಡ್‌, ದೇಶ್‌ ಸಾಲಿಡ್‌ʼ) ಎಂಬ  ಆಂದೋಲನವು ದೇಶವನ್ನು ಸದೃಢವಾಗಿಸುವಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತದ ಪಾತ್ರವನ್ನು ಎತ್ತಿ ತೋರಿಸುತ್ತದೆಇದೊಂದು ವಿನೂತನ ಅಭಿಯಾನವಾಗಿದೆ.  ಪ್ರಖ್ಯಾತ ಬಾಲಿವುಡ್‌ ನಟ ಸನ್ನಿ ದೇವಲ್‌ (ಡಿಯೋಲ್)‌ ಅವರು ಇರುವಂಥ  ಹಿಂದಿನ ಬ್ರಾಂಡ್‌ ನಂತರದ ಭಾಗವಾಗಿ  (ಸೀಕ್ವೆಲ್)‌  ಅಭಿಯಾನ ಆರಂಭಿಸಿರುವುದರಿಂದ ಇದು ಆವಿಷ್ಕಾರಕವಾಗಿದೆ

 

ʻವೋಟ್‌ ಸಾಲಿಡ್‌, ದೇಶ್‌ ಸಾಲಿಡ್‌ʼ ಎನ್ನುವುದು  ಅಭಿಯಾನದ ಪ್ರಮುಖ ಸಂದೇಶವಾಗಿದೆಒಂದು ದೃಢವಾದ ಮನೆ ನಿರ್ಮಿಸಲು ಬಂಗೂರ್‌ ಸಿಮೆಂಟ್‌ ನಿಮಗೆ ಹೇಗೆ ನೆರವಾಗುವುದೋ ಅದೇ ರೀತಿಯಲ್ಲಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ   ಸದೃಢವಾದ ದೇಶ ಕಟ್ಟಲು ನೀವು ನೆರವಾಗಬಹುದು.

 

ತನ್ನ ವೆಬ್ಸೈಟ್‌  votekavachan.bangurcement.com ನಲ್ಲಿ ʻಮತದಾನದ ಪ್ರತಿಜ್ಞೆʼ (ʻವೋಟ್‌ ಕಾ ವಚನ್‌ʼ) ಗುಂಡಿ ಒತ್ತುವ ಮೂಲಕ ಮತ ಚಲಾಯಿಸುವ ಪ್ರತಿಜ್ಞೆ ಕೈಗೊಳ್ಳಲು ನಾಗರಿಕರಿಗೆ ಬ್ರಾಂಡ್‌ ಉತ್ತೇಜನ ನೀಡುತ್ತದೆಮತದಾನ ಮಾಡುವ ಪ್ರತಿಯೊಂದು ಪ್ರತಿಜ್ಞೆಗೆ 1 ಕೆಜಿ‌ ಸಿಮೆಂಟ್‌ ದಾನ ಮಾಡಲು ಬಂಗೂರ್‌ ಸಿಮೆಂಟ್‌ ಪ್ರತಿಜ್ಞೆ ಮಾಡಿದ್ದು  ಸಿಮೆಂಟ್‌ ಅನ್ನು ಸಾಮಾಜಿಕ ಕಲ್ಯಾಣ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ ವಚನವನ್ನು ಪೂರ್ಣಗೊಳಿಸಲು ಸೂಕ್ತ ಸರ್ಕಾರೇತರ ಸಂಸ್ಥೆಗಳು (ಎನ್ಜಿಒಗಳುಮತ್ತು ಸ್ವಸಹಾಯ ಗುಂಪುಗಳ ಜತೆ ಬಂಗೂರ್‌ ಸಿಮೆಂಟ್‌ ಸಹಯೋಗ ಮಾಡಿ ಕೊಳ್ಳಲಿದೆ.

 

ಅಭಿಯಾನದ ಕುರಿತು ಮಾತನಾಡಿದ ಶ್ರೀ ಸಿಮೆಂಟ್ ಆಡಳಿತ ನಿರ್ದೇಶಕ  ನೀರಜ್‌ ಅಖೌರಿ ಹೀಗೆ ಹೇಳಿದರು. ʻʻಬಂಗೂರ್‌ ಸಿಮೆಂಟ್ ʻವೋಟ್‌ ಸಾಲಿಡ್‌ ದೇಶ್‌ ಸಾಲಿಡ್‌ʼ ಅಭಿಯಾನ ಮತ್ತು ʻವೋಟ್‌ ಕಾ ವಚನ್‌ʼ (ಮತದಾನದ ಪ್ರತಿಜ್ಞೆಪ್ರತಿಜ್ಞೆಯು ನಮ್ಮ ಬ್ರಾಂಡ್ಗಳುಉತ್ಪನ್ನಗಳು ಮತ್ತು ಜಾಲದ ಮೂಲಕ ಒಳಗೊಳ್ಳುವ ಬೆಳವಣಿಗೆಯೊಂದಿಗೆ ಒಂದು ಪ್ರಗತಿಪರ ದೇಶವನ್ನು ಕಟ್ಟುವ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತದೆʼʼ.

WhatsApp Group Join Now
Telegram Group Join Now
Share This Article