ಚೈತ್ರಾ & ಗ್ಯಾಂಗ್ ನಿಂದ ವಂಚನೆ ಪ್ರಕರಣ: ಸಾಕ್ಷಿ ಹೇಳದಂತೆ ವ್ಯಕ್ತಿಯ ಮೇಲೆ ಆರೋಪಿಯಿಂದ ಹಲ್ಲೆ

khushihost
ಚೈತ್ರಾ & ಗ್ಯಾಂಗ್ ನಿಂದ ವಂಚನೆ ಪ್ರಕರಣ: ಸಾಕ್ಷಿ ಹೇಳದಂತೆ ವ್ಯಕ್ತಿಯ ಮೇಲೆ ಆರೋಪಿಯಿಂದ ಹಲ್ಲೆ
WhatsApp Group Join Now
Telegram Group Join Now

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ್ದ ಚೈತ್ರಾ & ಗ್ಯಾಂಗ್ ರಾಜ್ಯಾದ್ಯಂತ ಭಾರಿ ಸುದ್ದಿಮಾಡಿತ್ತು. ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಪ್ರಕರಣದ ಪ್ರಮುಖ ಆರೋಪಿ ಧನರಾಜ್, ವ್ಯಕ್ತಿಯೋರ್ವರಿಗೆ ಸಾಕ್ಷಿ ಹೇಳದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಸಲೂನ್ ಮಾಲೀಕ ರಾಮು ಎಂಬುವವರ ಮೇಲೆ ಆರೋಪಿ ಧನರಾಜ್, ಸಾಕ್ಷಿ ಹೇಳದಂತೆ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಬೀರೂರು ಠಾಣೆಯಲ್ಲಿ ರಾಮು ದೂರು ದಾಖಲಿಸಿದ್ದಾರೆ.

ಸಲೂನ್ ಮಾಲೀಕ ರಾಮು, ಚೈತ್ರಾ & ಗ್ಯಾಂಗ್ ವಂಚನೆ ಪ್ರಕರಣದ ಆರೋಪಿ ಗೋಪಾಲ್ ಜಿ ಪಾತ್ರಧಾರಿಗೆ ಧನರಾಜ್ ಹೇಳಿದಂತೆ ಮೇಕಪ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ರಾಮುಗೆ ಬೆದರಿಕೆ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದ್ದು, ರಾಮು ಕುಟುಂಬ ನ್ಯಾಯಕ್ಕಾಗಿ ಎಸ್ ಪಿ ಮೊರೆ ಹೋಗಿದೆ.

WhatsApp Group Join Now
Telegram Group Join Now
Share This Article