ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಖಚಿತ:

Kuntinath
WhatsApp Group Join Now
Telegram Group Join Now

* *ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಖಚಿತ: ಶಾಸಕ ಮಹಾಂತೇಶ್ ಕೌಜಲಗಿ*
* *ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಬಿರುಸಿನ ಪ್ರಚಾರ*

*ಬೆಳಗಾವಿ* : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಗ್ಯಾರಂಟಿ. ಬೈಲಹೊಂಗಲ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅತ್ಯಧಿಕ ಮತಗಳಿಂದ ಮುನ್ನಡೆ ಗಳಿಸುವರು ಎಂದು ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ್ ಕೌಜಲಗಿ ಹೇಳಿದರು.

ಬೈಲಹೊಂಗಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬುಡರಕಟ್ಟಿ, ಗೋವನಕೊಪ್ಪ, ದೊಡವಾಡ ಹಾಗೂ ಕರೀಕಟ್ಟಿ ಗ್ರಾಮಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜೊತೆಗೂಡಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಮತಯಾಚಿಸಿದ ಶಾಸಕರು, ಬೈಲಹೊಂಗಲ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಯೋಗ್ಯ ಅಭ್ಯರ್ಥಿ ಆಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಕನಸು ಕಂಡಿರುವ ಮೃಣಾಲ್‌ ಹೆಬ್ಬಾಳ್ಕರ್, ತಾಯಿ‌ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬೆಂಬಲಿಸಿದಂತೆ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಶಾಸಕರು ಮನವಿ ಮಾಡಿದರು.

*ಜಗದೀಶ್ ಶೆಟ್ಟರ್ ಗೆ ಅಧಿಕಾರ ಮೋಹ*
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಅಧಿಕಾರ ಮೋಹ. ಮುಖ್ಯಮಂತ್ರಿ ಆದಮೇಲೂ ಮತ್ತೊಬ್ಬ ಮುಖ್ಯಮಂತ್ರಿಯ ಕ್ಯಾಬಿನೆಟ್ ನಲ್ಲಿ ಸಚಿವರಾಗ್ತಾರೆ‌. ಇದು ಕರ್ನಾಟಕ ರಾಜಕೀಯ ಇತಿಹಾಸದಲ್ಲೆ ಮೊದಲು. ಇಂಥ ಸಮಯ ಸಾಧಕ ರಾಜಕಾರಣಿಯನ್ನು ಬೆಳಗಾವಿಯಿಂದ ದೂರ ಇಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.

ಒಂದೆರಡು, ಸೋಫಾ, ಒಂದೆರಡು ಕುರ್ಚಿ, ಮೇಜುಗಳನ್ನು ತಂದು ಬಾಡಿಗೆ ಮನೆಗೆ ತಂದಿಟ್ಟು, ಇಲ್ಲೆ ಮನೆ ಮಾಡಿರುವೆ ಎಂದು ಶೆಟ್ಟರ್ ಹೊಸ ನಾಟಕ ಶುರು ಮಾಡಿದ್ದಾರೆ. ವ್ಯವಹಾರಿಕವಾಗಿ ಸಂಪೂರ್ಣ ಹುಬ್ಬಳ್ಳಿ ವ್ಯಕ್ತಿಯಾಗಿರುವ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಜನ ಒಪ್ಪಿಕೊಳ್ಳುವುದಿಲ್ಲ ಎಂದು ಸಚಿವರು ಹೇಳಿದರು. ಕ್ಷೇತ್ರದೊಂದಿಗೆ ಭಾವನಾತ್ಮಕ ನಂಟು ಇಟ್ಟಿಕೊಂಡರಷ್ಟೇ ಜನರ ಮನಸ್ಸು ಗೆಲ್ಲಲು ಸಾಧ್ಯ ಎಂದು ಹೇಳಿದರು.

ಮೃಣಾಲ್‌ ಹೆಬ್ಬಾಳ್ಕರ್ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾನೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ನನಗೆ ಎಂಪಿ ಆಗಬೇಕು ಎಂಬ ಕನಸಿತ್ತು. ಆದರೆ ಸಾಧ್ಯವಾಗಲಿಲ್ಲ. ಇದೀಗ ನನ್ನ ಮಗನ ಮೂಲಕ ಆ ಕನಸನ್ನು ನಿವೆಲ್ಲರೂ ಸೇರಿ ಈಡೇರಿಸಬೇಕು ಎಂದು ಸಚಿವರು ಹೇಳಿದರು.

ಬೆಳಗಾವಿಯ ಮಗನಾದ ನಾನು ನಿಮ್ಮೆಲ್ಲರ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡುವೆ. ಕರ್ನಾಟಕಕ್ಕೆ ಬೆಳಗಾವಿ ಜಿಲ್ಲೆಗೆ ಬರಬೇಕಾದ ಅನುಧಾನ, ಯೋಜನೆಗಳನ್ನು‌ ತರುವೆ. ಕಳೆದ 20 ವರ್ಷಗಳಿಂದ ಬಿಜೆಪಿ‌ ಸಂಸದರಿದ್ದರೂ ಯಾವುದೇ ಪ್ರಯೋಜನವಿಲ್ಲ. ಅಭಿವೃದ್ಧಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಹೇಳಿದರು.

ಪ್ರಚಾರಕ್ಕೂ ಮುನ್ನ ವಿವಿಧ ಗ್ರಾಮಸ್ಥರು ಪಟಾಕಿ ಸಿಡಿಸಿ, ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಬರಮಾಡಿಕೊಂಡರು, ಎಲ್ಲೆಡೆ ಸಚಿವರಿಗೆ ಮತ್ತು ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರಿಗೆ ಅದ್ದೂರಿಯ ಸ್ವಾಗತ ಸಿಕ್ಕಿತು.

ಆಯಾ ಗ್ರಾಮದ ಪ್ರಚಾರದ ವೇಳೆ ಶಿವರುದ್ರಪ್ಪ ಹಟ್ಟಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ, ಮಹಾಂತೇಶ್ ವಡ್ಡಿಕೊಪ್ಪ, ವಿಠ್ಠಲ ಕಾಳಿ, ಶ್ರೀಶೈಲ ವಾಲಿ, ಈರಪ್ಪ ಹತ್ತಿಗಟಗಿ, ಮಹಾದೇವಿ ಬೋಡಕಿ, ಜಾನವ್ವ ಬಾವನವರ್, ಬಸನಗೌಡ ಪಾಟೀಲ, ವೀರಭದ್ರ ಡೊಂಬರಕೊಪ್ಪ‌, ಮಹಾಲಿಂಗ ಕಿತ್ತೂರು, ಸವದತ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ,‌ ಅಸುಂಡಿ‌ ಗ್ರಾಮ ಪಂಚಾಯಿತಿ ಅಧ್ಯಕ್ಷ ಐ.ಎಸ್. ತೋಟಿಗೆರ, ಶಶಿಧರ‌ ಚಿಕ್ಕೋಡಿ, ಯಲ್ಲಪ್ಪ ಜಾವುರ, ಸಿದ್ದಪ್ಪ ಗೋರವಳ, ಜವಾರ್ ಉಪ್ಪಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article