ಚುನಾವಣಾ ವೆಚ್ಚ ವೀಕ್ಷಕರು ಸಾರ್ವಜನಿಕ ಭೇಟಿಗೆ ಲಭ್ಯ

Kuntinath
WhatsApp Group Join Now
Telegram Group Join Now

ಬೆಳಗಾವಿ ಲೋಕಸಭಾ ಕ್ಷೇತ್ರ: ಚುನಾವಣಾ ವೆಚ್ಚ ವೀಕ್ಷಕರು ಸಾರ್ವಜನಿಕ ಭೇಟಿಗೆ ಲಭ್ಯ

ಬೆಳಗಾವಿ, ಏ.13: ಚುನಾವಣಾ  ಆಯೋಗವು ನೇಮಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.

02-ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಬ್ಬರು ವೆಚ್ಚ ವೀಕ್ಷಕರನ್ನು ನೇಮಿಸಲಾಗಿದ್ದು, ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮೇಲೆ ಇವರು ನಿಗಾ ವಹಿಸಲಿದ್ದಾರೆ.

ವೆಚ್ಚ ವೀಕ್ಷಕರ ಹೆಸರು, ಮೊಬೈಲ್ ಸಂಖ್ಯೆ, ಭೇಟಿಯ ಸಮಯ ಹಾಗೂ ಸ್ಥಳದ ವಿವರ:

* ಐಆರ್ ಎಸ್ ಅಧಿಕಾರಿಗಳಾದ ಹರಕ್ರಿಪಾಲ್ ಖಟಾನಾ(ಅರಭಾವಿ, ಗೋಕಾಕ, ಬೆಳಗಾವಿ-ಉತ್ತರ ಮತ್ತು‌ ಬೆಳಗಾವಿ-ದಕ್ಷಿಣ) ಮೊಬೈಲ್ ಸಂಖ್ಯೆ-7259751395); ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ(ಹಳೆ ಐಬಿ) ಕೊಠಡಿ ಸಂಖ್ಯೆ-4, ಬೆಳಗಾವಿ. ಸಮಯ-ಬೆಳಿಗ್ಗೆ 10 ರಿಂದ 11 ಗಂಟೆ.

• ನರಸಿಂಗ್ ರಾವ್ ಬಿ.(ಬೆಳಗಾವಿ-ಗ್ರಾಮೀಣ, ಬೈಲಹೊಂಗಲ, ಸವದತ್ತಿ-ಯಲ್ಲಮ್ಮ ಮತ್ತು ರಾಮದುರ್ಗ) ಮೊಬೈಲ್ ಸಂಖ್ಯೆ-7348921395); ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ(ಹಳೆ ಐಬಿ) ಕೊಠಡಿ ಸಂಖ್ಯೆ-9, ಬೆಳಗಾವಿ. ಸಮಯ-ಬೆಳಿಗ್ಗೆ 10 ರಿಂದ 11 ಗಂಟೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನೇಮಕಗೊಂಡಿರುವ ಚುನಾವಣಾ ವೆಚ್ಚ ವೀಕ್ಷಕರು ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ ಎಂದು ಜಿಲ್ಲಾ ಚುಮಾವಣಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
***

WhatsApp Group Join Now
Telegram Group Join Now
Share This Article