ಕುಂತಿನಾಥ ಕಲಮನಿ ಅವರಿಗೆ ಗೊಮ್ಮಟ ದತ್ತಿ ಪ್ರಶಸ್ತಿ

Kuntinath
By Kuntinath
WhatsApp Group Join Now
Telegram Group Join Now

ಕುಂತಿನಾಥ ಎಸ್.ಕಲಮನಿ ಅವರಿಗೆ “ಗೊಮ್ಮಟ” ಪ್ರಶಸ್ತಿ
ಬೆಳಗಾವಿಯ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಹಳ್ಳಿಯ ಸಂದೇಶ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಕುಂತಿನಾಥ ಎಸ್.ಕಲಮನಿ ಅವರು ಪ್ರಸಕ್ತ ಸಾಲಿನ “ಗೊಮ್ಮಟ” ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದಿಂದ ನೀಡಲಾಗುವ ಈ ಪ್ರಶಸ್ತಿಯು ರೂ 5 ಸಾವಿರ ನಗದು ಹಣ, ಫಲಕ, ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಗೊಮ್ಮಟ ಮಾಧ್ಯಮ ಪ್ರಶಸ್ತಿಯನ್ನು ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಅವರು ಪ್ರಾಯೋಜಿಸಿದ್ದಾರೆ.

ಕುಂತಿನಾಥ ಕಲಮನಿ ಅವರು ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದು, ಅವರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ. ಈಗಾಗಲೇ ಕುಂತಿನಾಥ ಕಲಮನಿ ಅವರಿಗೆ ಜೈನ ಶೀಕ್ಷಕರ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂಘದ ವತಿಯಂದ ರಾಜ್ಯಮಟ್ಟದ “ವೃಷಭಶ್ರೀ”. ಬೆಳಗಾವಿ ಜಿಲ್ಲಾಡಳಿತ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ “ರಾಜ್ಯೋತ್ಸವ ಪ್ರಶಸ್ತಿ” ದಕ್ಷಿಣ ಭಾರತ ಜೈನ ಸಭೆಯ ಪ್ರತಿಷ್ಠಿತ “ವಾ.ರಾ.ಕೊಠಾರಿ ಆದರ್ಶ ಪತ್ರಕರ್ತ ಪ್ರಶಸ್ತಿ” ಉತ್ತರ ಕರ್ನಾಟಕ ಜೈನ ಮಹಾಸಂಘದ ವತಿಯಿಂದ ರಾಜ್ಯಮಟ್ಟದ “ಸಮಾಜ ಸೇವಾ ಪ್ರಶಸ್ತಿ ಪುರಸ್ಕಾರ,” ಸಾರ್ವಜನಿಕ ಗ್ರಂಥಾಲಯ ಬೆಳಗಾವಿ ವತಿಯಿಂದ ನೀಡಲಾಗುವ “ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಇದೀಗ ಅವರಿಗೆ ಗೊಮ್ಮಟ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಗೆ ಕೈಗನ್ನಡಿಯಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ಎಂಬ ಹಾರೈಸುತ್ತ ಪ್ರಶಸ್ತಿ ಭಾಜನರಾದ ಕುಂತಿನಾಥ ಕಲಮನಿ ಅವರಿಗೆ ಹಾರ್ದಿಕ ಅಭಿನಂದನೆಗಳು.

WhatsApp Group Join Now
Telegram Group Join Now
Share This Article