ಆವ್ಫಿಸ್ ಸ್ಪೇಸ್ ಸೊಲ್ಯುಷನ್ಸ್ ಲಿಮಿಟೆಡ್‌ ಐಪಿಒ ಬಿಡುಗಡೆ

Kuntinath
ಆವ್ಫಿಸ್ ಸ್ಪೇಸ್ ಸೊಲ್ಯುಷನ್ಸ್ ಲಿಮಿಟೆಡ್‌ ಐಪಿಒ ಬಿಡುಗಡೆ
WhatsApp Group Join Now
Telegram Group Join Now

ಮೇ 22, 2024ರಂದು ಇನಿಷಿಯಲ್ ಪಬ್ಲಿಕ್ ಆಫರಿಂಗ್ ತೆರೆಯಲಿರುವ ಆವ್ಫಿಸ್ ಸ್ಪೇಸ್ ಸೊಲ್ಯೂಷನ್ಸ್ ಲಿಮಿಟೆಡ್

ಹುಬ್ಬಳ್ಳಿ:ಆವ್ಫಿಸ್ (Awfis) ಸ್ಪೇಸ್ ಸೊಲ್ಯೂಷನ್ಸ್ ಲಿಮಿಟೆಡ್ ನ ₹10 ಮುಖಬೆಲೆಯ (“ಈಕ್ವಿಟಿ ಷೇರುಗಳು”) ಪ್ರತಿ ಈಕ್ವಿಟಿ ಷೇರಿಗೆ ₹364 ರಿಂದ ₹383ಕ್ಕೆ ದರ ಪಟ್ಟಿಯನ್ನು ನಿಗದಿಪಡಿಸಲಾಗಿದೆ

• ಆಂಕರ್ ಇನ್ವೆಸ್ಟರ್ ಬಿಡ್ಡಿಂಗ್ ದಿನಾಂಕ – ಮೇ 21, 2024
• ಬಿಡ್/ಆಫರ್ ತೆರೆಯುವ ದಿನಾಂಕ – ಮೇ 22, 2024, ಮತ್ತು ಬಿಡ್/ಆಫರ್ ಮುಕ್ತಾಯ ದಿನಾಂಕ – ಮೇ 27, 2024
• ಕನಿಷ್ಠ 39 ಈಕ್ವಿಟಿ ಷೇರುಗಳಿಗೆ ಮತ್ತು 39 ಈಕ್ವಿಟಿ ಷೇರುಗಳ ಮಲ್ಟಿಪಲ್ ಗಳಲ್ಲಿ ಬಿಡ್ಗಳನ್ನು ಮಾಡಬಹುದು

ಮೇ 16, 2024: ಸಿಬಿಆರ್ಇ ವರದಿಯ ಪ್ರಕಾರ ಭಾರತದ ಅತಿದೊಡ್ಡ ಫ್ಲೆಕ್ಸಿಬಲ್ ವರ್ಕ್ ಸ್ಪೇಸ್ ಸೊಲ್ಯೂಷನ್ಸ್ ಕಂಪನಿ ಆಗಿರುವ ಆವ್ಫಿಸ್ (Awfis) ಸ್ಪೇಸ್ ಸೊಲ್ಯೂಷನ್ಸ್ ಲಿಮಿಟೆಡ್ (“ಕಂಪನಿ”), ಮೇ 22,2024 ರಂದು ತನ್ನ ಈಕ್ವಿಟಿ ಷೇರುಗಳ (“ಆಫರ್”) ಇನಿಷಿಯಲ್ ಪಬ್ಲಿಕ್ ಆಫರಿಂಗ್ ತೆರೆಯಲು ಪ್ರಸ್ತಾವನೆ ಸಲ್ಲಿಸಿದೆ. ಬಿಡ್/ಆಫರ್ ತೆರೆಯುವ ದಿನಾಂಕದ ಮೊದಲಿನ ಒಂದು ಕೆಲಸದ ದಿನ ಅಂದರೆ ಮೇ 21, 2024ರಂದು ಆಂಕರ್ ಇನ್ವೆಸ್ಟರ್ ಬಿಡ್ಡಿಂಗ್ ನಡೆಯಲಿದೆ. ಮೇ 27, 2024 ಬಿಡ್/ಆಫರ್ ಮುಕ್ತಾಯ ದಿನಾಂಕ ಆಗಿರುತ್ತದೆ.

ಆಫರ್ನ ದರ ಪಟ್ಟಿಯನ್ನು ಪ್ರತಿ ಈಕ್ವಿಟಿ ಷೇರಿಗೆ ₹364 ರಿಂದ ಪ್ರತಿ ಈಕ್ವಿಟಿ ಷೇರಿಗೆ ₹383ಕ್ಕೆ ನಿಗದಿಪಡಿಸಲಾಗಿದೆ. ಕನಿಷ್ಠ 39 ಈಕ್ವಿಟಿ ಷೇರುಗಳು ಮತ್ತು 39 ಈಕ್ವಿಟಿ ಷೇರುಗಳ ಮಲ್ಟಿಪಲ್ ಗಳಿಗೆ ಬಿಡ್ಗಳನ್ನು ಮಾಡಬಹುದು.

ಆಫರ್ ಒಟ್ಟು ₹ 1,280.00 ಮಿಲಿಯನ್ವರೆಗಿನ [●] ಈಕ್ವಿಟಿ ಷೇರುಗಳ ಹೊಸ ಸಂಚಿಕೆಯನ್ನು ಒಳಗೊಂಡಿದೆ (“ತಾಜಾ ಸಂಚಿಕೆ”) ಮತ್ತು 12,295,699 ಈಕ್ವಿಟಿ ಷೇರುಗಳ (“ಆಫರ್ ಮಾಡಿದ ಷೇರುಗಳು”) ಒಟ್ಟು ₹ [●]ಮಿಲಿಯನ್ ವರೆಗಿನ ಮಾರಾಟದ ಕೊಡುಗೆಯು, ಪೀಕ್ XV ಪಾರ್ಟ್ನರ್ಸ್ ಇನ್ವೆಸ್ಟ್ ಮೆಂಟ್ಸ್ V (ಹಿಂದೆ ಇದನ್ನು ಎಸ್ ಸಿ ಐ ಇನ್ವೆಸ್ಟ್ ಮೆಂಟ್ಸ್ V ಎಂದು ಕರೆಯಲಾಗುತ್ತಿತ್ತು) (“ಪೀಕ್ XV” ಅಥವಾ “ಪ್ರೋಮೋಟರ್ ಸೆಲ್ಲಿಂಗ್ ಶೇರ್ಹೋಲ್ಡರ್”) ಅವರ ಒಟ್ಟು ಗೂಡಿಸಿದ ₹ [●] ಮಿಲಿಯನ್ ವರೆಗಿನ 6,615,586 ಈಕ್ವಿಟಿ ಷೇರುಗಳನ್ನು, ಬಿಸ್ಕ್ ಲಿಮಿಟೆಡ್ನ ₹ [●] ಮಿಲಿಯನ್ ವರೆಗಿನ ಒಟ್ಟು ಗೂಡಿಸಿದ 5,594,912 ಈಕ್ವಿಟಿ ಷೇರುಗಳು ಮತ್ತು ಲಿಂಕ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ನ ಒಟ್ಟು ₹ [●] ಮಿಲಿಯನ್ನವರೆಗಿನ ಒಟ್ಟುಗೂಡಿಸಿದ 85,201 ಈಕ್ವಿಟಿ ಷೇರುಗಳನ್ನು ಹೊಂದಿದೆ. (ಒಟ್ಟಾರೆಯಾಗಿ, “ಸೆಲ್ಲಿಂಗ್ ಷೇರ್ ಹೋಲ್ಡರ್ಸ್” ಮತ್ತು ಮಾರಾಟ ಮಾಡುವ ಷೇರುದಾರರಿಂದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು, “ಸೇಲ್ ಆಫರ್”) ಆಫರ್ ನಮ್ಮ ಕಂಪನಿಯ ಪೋಸ್ಟ್- ಆಫರ್ ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ [●]% ರಷ್ಟಿರುತ್ತದೆ.

ಅರ್ಹ ಉದ್ಯೋಗಿಗಳಿಂದ ಚಂದಾದಾರಿಕೆಗಾಗಿ ₹20.00 ಮಿಲಿಯನ್ ವರೆಗಿನ ಒಟ್ಟುಗೂಡಿಸಿದ [●] ಈಕ್ವಿಟಿ ಷೇರುಗಳ (ನಮ್ಮ ಕಂಪನಿಯ ಪೋಸ್ಟ್ ಆಫರ್ ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ [●]% ವರೆಗೆ ಒಳಗೊಂಡು) ಕಾಯ್ದಿರಿಸುವಿಕೆಯನ್ನು ಆಫರ್ ಒಳಗೊಂಡಿದೆ(“ನೌಕರರ ಮೀಸಲಾತಿ ಭಾಗ (ಎಂಪ್ಲಾಯೀ ರಿಸರ್ವೇಷನ್ ಪೋರ್ಷನ್)”). ಉದ್ಯೋಗಿ ಮೀಸಲಾತಿ ಭಾಗವನ್ನು ಕಡಿತಗೊಳಿದ ಆಫರ್ ಅನ್ನು ಇನ್ನು ಮುಂದೆ “ನೆಟ್ ಆಫರ್” ಎಂದು ಉಲ್ಲೇಖಿಸಲಾಗುತ್ತದೆ. ಆಫರ್ ಮತ್ತು ನೆಟ್ ಆಫರ್ ನಮ್ಮ ಕಂಪನಿಯ ಪೋಸ್ಟ್- ಆಫರ್ ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ ಕ್ರಮವಾಗಿ [●]% ಮತ್ತು [●]% ಅನ್ನು ಒಳಗೊಂಡಿರುತ್ತದೆ. ನಮ್ಮ ಕಂಪನಿಯು ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಗಳೊಂದಿಗೆ ಸಮಾಲೋಚಿಸಿ, ಉದ್ಯೋಗಿ ಮೀಸಲಾತಿ ಭಾಗದ ಅಡಿಯಲ್ಲಿ ಬಿಡ್ ಮಾಡುವ ಅರ್ಹ ಉದ್ಯೋಗಿಗಳಿಗೆ [•]% (ಪ್ರತಿ ಈಕ್ವಿಟಿ ಷೇರಿಗೆ ₹[●] ಸಮಾನ) ವರೆಗಿನ ಆಫರ್ ಬೆಲೆಗೆ ರಿಯಾಯಿತಿಯನ್ನು ನೀಡಬಹುದು (“ನೌಕರ ರಿಯಾಯಿತಿ”).

ಕಂಪನಿಯು ನಿವ್ವಳ ಆದಾಯವನ್ನು ಹೊಸ ಕೇಂದ್ರಗಳ ಸ್ಥಾಪನೆ, ಕಂಪನಿಯ ಕಾರ್ಯನಿರತ ಬಂಡವಾಳದ ಅವಶ್ಯಕತೆಗಳು ಮತ್ತು ಸಾಮಾನ್ಯ ಸಾಂಸ್ಥಿಕ ಉದ್ದೇಶಗಳ ಬಂಡವಾಳದ ವೆಚ್ಚಕ್ಕಾಗಿ ಬಳಸಿಕೊಳ್ಳಲು ಪ್ರಸ್ತಾಪಿಸುತ್ತದೆ.

WhatsApp Group Join Now
Telegram Group Join Now
Share This Article