ರಾಮದುರ್ಗ ಬಾರ್ ಅಸೋಸಿಯೇಶನ್ ನಲ್ಲಿ ಮತ ಯಾಚನೆ :

Kuntinath
WhatsApp Group Join Now
Telegram Group Join Now

ರಾಮದುರ್ಗ ಬಾರ್ ಅಸೋಸಿಯೇಶನ್ ನಲ್ಲಿ ಮತ ಯಾಚನೆ : ಬೆಂಬಲದ ಭರವಸೆ

ಬೆಳಗಾವಿ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಮದುರ್ಗ ಬಾರ್ ಅಸೋಸಿಯೇಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಮತ ಯಾಚಿಸಿದರು. ಈ ಸಮಯದಲ್ಲಿ ವಕೀಲರ ಸಂಘದವರೆಲ್ಲ ಸೇರಿ ಸರ್ವಾನುಮತದಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದರು.
ಬೆಳಗಾವಿ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಕಳಕಳಿ ಹೊಂದಿರುವ ಯುವಕ, ವಿದ್ಯಾವಂತ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ. ಎಲ್ಲರೂ ಸೇರಿ ಬೆಳಗಾವಿಯಲ್ಲಿ ಅಭಿವೃದ್ಧಿಪಡಿಸೋಣ. ಪಕ್ಷಾತೀತವಾಗಿ ಎಲ್ಲರ ಬೆಂಬಲದಿಂದ ಭಾರೀ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.

ಈ ಸಂದರ್ಭದಲ್ಲಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ರಮೇಶ ಹಲ್ಯಾಳ, ಉಪಾಧ್ಯಕ್ಷರಾದ ನಾಡಗೌಡರ್, ವಿ.ಬಿ.ಸಿದ್ದಾಟಗಿಮಠ್, ಪರ್ವತಗೌಡ, ಅನೇಕ ಹಿರಿಯ ಹಾಗೂ ಕಿರಿಯ ವಕೀಲರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article