ಟಿವಿಎಸ್ ಐಕ್ಯೂಬ್ ಹೊಸ ಶ್ರೇಣಿ ಬಿಡುಗಡೆ

Kuntinath
WhatsApp Group Join Now
Telegram Group Join Now

ಟಿವಿಎಸ್ ಐಕ್ಯೂಬ್ ಹೊಸ ಶ್ರೇಣಿ ಬಿಡುಗಡೆ
ಹುಬ್ಬಳ್ಳಿ: ಟಿವಿಎಸ್ ಮೋಟಾರ್ ಕಂಪನಿ ಇಂದು ೨.೨ ಕಿವ್ಯಾ ಬ್ಯಾಟರಿ ಆಯ್ಕೆ ಲಭ್ಯವಿರುವ ಐಕ್ಯೂಬ್ ನ ಹೊಸ ರೂಪಾಂತರವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಎಂದು ಘೋಷಿಸಿದೆ. ಟಿವಿಎಸ್ ಐಕ್ಯೂಬ್ ಎಸ್‌ಟಿ ಈಗ ೩.೪ ‹ಕ್‌ಹ್ ಮತ್ತು ೫.೧ ‹ಕ್‌ಹ್ ಎಂಬ ಎರಡು ಬ್ಯಾಟರಿ ವೇರಿಯೆಂಟ್ ಗಳಲ್ಲಿ ದೊರೆಯಲಿದೆ. ಇದು ಈ ವಿಭಾಗದಲ್ಲಿನ ಅತಿದೊಡ್ಡ ಬ್ಯಾಟರಿ ಪ್ಯಾಕ್ ಆಗಿದೆ. ಇದರೊಂದಿಗೆ, ಐಕ್ಯೂಬ್ ಸರಣಿಯು ಈಗ ಅತ್ಯಾಕರ್ಷಕ ೧೧ ಬಣ್ಣಗಳಲ್ಲಿ ದೊರೆಯಲಿರುವ ಐದು ವೇರಿಯೆಂಟ್ ಗಳ ಉತ್ಪನ್ನ ಶ್ರೇಣಿಯನ್ನು ಒದಗಿಸುತ್ತದೆ. ಇದು ಮಾರುಕಟ್ಟೆಯಲ್ಲಿರುವ ಅತಿದೊಡ್ಡ ಮತ್ತು ಅತ್ಯಂತ ಆಕರ್ಷಕವಾದ ಇವಿ ಉತ್ಪನ್ನ ಶ್ರೇಣಿಗಳಲ್ಲಿ ಒಂದಾಗಿದೆ.

ಕರ್ನಾಟಕದ ಟಿವಿಎಸ್ ಐಕ್ಯೂಬ್ ಗ್ರಾಹಕರು ಇದುವರೆಗೆ ತಮ್ಮ ಟಿವಿಎಸ್ ಐಕ್ಯೂಬ್ ನಲ್ಲಿ ೩೮೦,೪೫೮,೨೦೮ ಕಿಮೀ ದೂರವನ್ನು ಕ್ರಮಿಸಿದ್ದಾರೆ. ಆ ಲೆಕ್ಕಾಚಾರದ ಪ್ರಕಾರ ಇದುವರೆಗೆ ೧೩,೦೦೦ ಟನ್‌ಗಳಷ್ಟು ಮೌಲ್ಯದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲಾಗಿದೆ.

ಕಂಪನಿಯು ಇವಿ ವಿಭಾಗದ ಮೇಲೆ ತಮಗಿರುವ ಬದ್ಧತೆಯನ್ನು ಸಾರಿದೆ. ಈ ದೃಷ್ಟಿಕೋನವನ್ನು ಮುಂದುವರಿಸುತ್ತಾ ಮತ್ತು ಎಲ್ಲರಿಗೂ ಇವಿ ಅನ್ನು ಕೈಗೆಟುಕುವಂತೆ ಮಾಡುವ ಉದ್ದೇಶ ಹಾಗೂ ಪ್ರಯತ್ನದಲ್ಲಿ ಹೊಸತಾಗಿ ೨.೨ ‹ಕ್‌ಹ್ ಬ್ಯಾಟರಿ ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಟಿವಿಎಸ್ ಐಕ್ಯೂಬ್ ಸರಣಿಯು ಈಗ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆ ರೂ. ೯೪,೯೯೯ ಕ್ಕೆ ದೊರೆಯಲಿದೆ. ಇದರಿಂದ ಗ್ರಾಹಕರಿಗೆ ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಸಹಾಯವಾಗಲಿದೆ.

ಹೊಸ ರೂಪಾಂತರಗಳ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ಮೋಟಾರ್ ಕಂಪನಿಯ ಇವಿ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮನು ಸಕ್ಸೇನಾ, “ಟಿವಿಎಸ್ ಮೋಟಾರ್ ಕಂಪನಿಯಲ್ಲಿ ನಾವು ಉದ್ಯಮದಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಗೆ ಚಾಲನೆ ನೀಡಲು ಬದ್ಧರಾಗಿದ್ದೇವೆ. ನಮ್ಮ ೩ ಲಕ್ಷ ದಷ್ಟು ವಿಸ್ತಾರವಾದ ಟಿವಿಎಸ್ ಐಕ್ಯೂಬ್ ಕುಟುಂಬದ ಬೆಳವಣಿಗೆಯನ್ನು ವೀಕ್ಷಿಸುವುದು ನಿಜಕ್ಕೂ ಆನಂದದಾಯಕ ಅನುಭವವಾಗಿದೆ. ನಮ್ಮ ಇವಿ ಗ್ರಾಹಕರ ರೈಡಿಂಗ್ ಪ್ರಯಾಣದ ಮೂಲಕ ಪಡೆದ ಅನುಭವದ ಆಧಾರದಿಂದ ನಾವು ಟಿವಿಎಸ್ ಐಕ್ಯೂಬ್ ಸರಣಿಯಲ್ಲಿ ಹೊಚ್ಚ ಹೊಸ ೨.೨ ಕಿವ್ಯಾ ಫಾಸ್ಟೆಸ್ಟ್ ಚಾರ್ಜ್ ರೂಪಾಂತರವನ್ನು ಮತ್ತು ಟಿವಿಎಸ್ ಐಕ್ಯೂಬ್ ಎಸ್ ಟಿಯ ಹೆಚ್ಚುವರಿ ರೂಪಾಂತರವನ್ನು ನಾವು ತುಂಬಾ ಸಂತೋಷದಿಂದ ಬಿಡುಗಡೆ ಮಾಡುತ್ತಿದ್ದೇವೆ. ಟಿವಿಎಸ್ ಐಕ್ಯೂಬ್ ಎಲೆಕ್ಟಿçಕ್ ಸರಣಿಯು ಈಗ ೩ ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದ್ದು, ನಮ್ಮ ಗ್ರಾಹಕರಿಗೆ ಸೂಕ್ತವಾದ ರೇಂಜ್ ಮತ್ತು ದರದಲ್ಲಿ ದೊರೆಯಲಿದೆ. ಸಂಪೂರ್ಣ ಟಿವಿಎಸ್ ಐಕ್ಯೂಬ್ ಸರಣಿಯು ಈಗ ಭಾರತದಾದ್ಯಂತ ಡೆಲಿವರಿ ಹೊಂದಲು ಸಿದ್ಧವಿದೆ. ಟಿವಿಎಸ್ ಮೋಟಾರ್ ವಿಶ್ವಾಸಾರ್ಹವಾದ, ಉತ್ತಮವಾದ ಮತ್ತು ಸುಲಭವಾಗಿ ಕೈಗೆಟಕುವ ಎಲೆಕ್ಟಿçಕ್ ವಾಹನ ಅನುಭವವನ್ನು ಒದಗಿಸುವ ಮೂಲಕ ನಮ್ಮ ಗ್ರಾಹಕರ ಯಶಸ್ಸಿನ ಪ್ರಯಾಣದಲ್ಲಿ ಪಾಲುದಾರರಾಗುವುದನ್ನು ಮುಂದುವರೆಸುತ್ತದೆ” ಎಂದರು.

ಟಿವಿಎಸ್ ಐಕ್ಯೂಬ್ ಮೂರು ಮೂಲಭೂತ ತತ್ವಗಳಿಂದ ಪ್ರೇರಿತವಾಗಿದೆ, ಅವುಗಳೆಂದರೆ: ೧. ಗ್ರಾಹಕರಿಗೆ ರೇಂಜ್, ಸಂಪರ್ಕಿತ ತಂತ್ರಜ್ಞಾನ, ಚಾರ್ಜ್ ಗ್ ಪರಿಹಾರಗಳು ಮತ್ತು ಬೆಲೆ ಆಧಾರದಲ್ಲಿ ಆಯ್ಕೆಯ ಶಕ್ತಿಯನ್ನು ನೀಡುವುದು. ೨. ವಾಹನ ಸುರಕ್ಷತೆ ಮತ್ತು ಒಟ್ಟಾರೆ ಮಾಲೀಕತ್ವದ ಅನುಭವ ಒದಗಿಸುವ ಮೂಲಕ ಸಂಪೂರ್ಣ ಭರವಸೆ ಒದಗಿಸುವುದು. ೩. ಗ್ರಾಹಕರ ರೈಡಿಂಗ್ ಅನುಭವವನ್ನು ಹೆಚ್ಚಿಸಲು ಬಳಕೆಗೆ ಸುಲಭವಾದ ಫೀಚರ್ ಗಳ ಮೂಲಕ ಸರಳವಾಗಿ ರೈಡಿಂಗ್ ಮಾಡುವಂತೆ ಮಾಡುವುದು. ಈ ಬಿಡುಗಡೆಯ ಮೂಲಕ ಬ್ರಾಂಡ್ ನ ಘೋಷವಾಕ್ಯವಾದ ‘ಭದೆ ಆರ್ಮಾನೊನ್ಕಿಆಚ್ಚಿಷುರುವತ್ ಎಂಬುದಕ್ಕೆ ಅನುಗುಣವಾಗಿ ಟಿವಿಎಸ್ ಐಕ್ಯೂಬ್ ಸರಣಿಯು ಒದಗಿಸುವ ಆಯ್ಕೆಗಳ ಮೂಲಕ ವಿವಿಧ ವಿಭಾಗಗಳಲ್ಲಿ ತಮ್ಮ ಇವಿ ಪ್ರಯಾಣವನ್ನು ಆರಂಭಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
Share This Article