ಜೈನ ಸಮಾಜದ ವಿದ್ಯಾರ್ಥಿಗಳಿಗೆ ಯುಪಿಎಸ್ಸ್ಸಿ ಉಚಿತ ತರಬೇತಿ

Kuntinath
WhatsApp Group Join Now
Telegram Group Join Now

ಜಿತೋ ಸಂಸ್ಥೆ ವತಿಯಿಂದ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಯುಪಿಎಸ್ಸ್ಸಿ ಉಚಿತ ತರಬೇತಿ
ಬೆಳಗಾವಿ.ಏ.6: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೇಝೇಶನ ಜಿತೋ ಸಂಸ್ಥೆಯ ವತಿಯಿಂದ ಕಳೆದ 11 ವರ್ಷಗಳಿಂದ ಜೈನ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಯುಪಿಎಸ್ಸ್ಸಿ ಸ್ಪರ್ಧಾತ್ಮ ಪರೀಕ್ಷೆಯ ಸಿದ್ದತೆಗಾಗಿ ಉಚಿತ ತರಬೇತಿಯನ್ನು ನೀಡುತ್ತ ಬಂದಿದೆ.
ಈ ವರ್ಷವೂ ಸಹ ಜಿತೋ ಸಂಸ್ಥೆಯ ವತಿಯಿಂದ ಯುಪಿಎಸ್ಸ್ಸಿ ಪರೀಕ್ಷೆಯ ಸಿದ್ದತೆಗಾಗಿ ಉಚಿತ ತರಬೇತಿಯನು ನೀಡಲಿದೆ. ಇದಕ್ಕಾಗಿ ಸಮಾಜದ ವಿದ್ಯಾರ್ಥಿಗಳು ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಹೆಸರು ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಹೆಸರು ನೋಂದಣಿ ಮಾಡುವ ದಿನಾಂಕ ಏಪ್ರಿಲ 24 ಆಗಿದ್ದು, ಈ ಅವಧಿಯೊಳಗೆ ಹೆಸರು ನೊಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕುಂತಿನಾಥ ಕಲಮನಿ ಮೊ:94804-48108 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
****************

WhatsApp Group Join Now
Telegram Group Join Now
Share This Article