ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡುವ ಕಾಂಗ್ರೆಸ್ ಗೆ ಮತ ನೀಡಿ:

Kuntinath
WhatsApp Group Join Now
Telegram Group Join Now

ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡುವ ಕಾಂಗ್ರೆಸ್ ಗೆ ಮತ ನೀಡಿ: ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ
ಬೆಳಗಾವಿ: ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವಂತಹ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಚಿಕ್ಕೋಡಿ ಲೋಕಸಭೆ‌ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಅಲತಗಾ, ಜಾಫರವಾಡಿ, ಚಲುವೇನಟ್ಟಿ, ಮಾಳೇನಟ್ಟಿ, ಮನ್ನಿಕೇರಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ಮುಖ್ಯ ;ದೇಶದಲ್ಲಿ ಮದ್ಯದ ಹಾಗೂ ಕೆಳವರ್ಗದಲ್ಲಿ ಕೋಟ್ಯಾಂತರ ಜನತೆ ಜೀವನ ಸಾಗಿಸುತ್ತಿದ್ದಾರೆ. ತಾಲೂಕು, ಜಿಲ್ಲೆಗಳು ಅಲ್ಪ ಮಟ್ಟಿಗೆ ಸುದಾರಣೆ ಕಂಡಿವೆ ಆದರೆ, ಗ್ರಾಮೀಣ ಜನತೆ ಬಹಳಷ್ಟು ಅಭಿವೃದ್ಧಿ ಕಾಣಬೇಕು. ಅಲ್ಲಿಯ ಸಹೋದರ-ಸಹೋದರಿಯರು ಶಿಕ್ಷಣ ಪಡೆದು ದೇಶ-ವಿದೇಶದಲ್ಲಿ ಮಿಂಚಬೇಕಿದೆ.
ಆ ಮದ್ಯದ ಹಾಗೂ ಕೆಳವರ್ಗವನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಅದು ನಿಮ್ಮಂದ ಸಾಧ್ಯ, ಮತದಾರರು ದೃಢ ನಿರ್ಧಾರ ಮಾಡಿ ಕಾಂಗ್ರೆಸ್‌ ಮತ ಬೇಕು ಎಂದರು. ಕಾಲಮಾನ ಉರುಳಿದಂತೆ ದೇಶದ ಅಭಿವೃದ್ಧಿ ಮುಖ್ಯವಾಗಿದೆ, ಜಿಲ್ಲೆಯ ಭಾಗದ ಜನತೆ ಬದಲಾವಣೆ ಹೊಂದಬೇಕಿದೆ. ಸಹೋದರ-ಸಹೋದರಿಯರು ಶಿಕ್ಷಣದೆಡೆಗೆ ಹೆಜ್ಜೆ ಹಾಕಬೇಕಿದೆ ಹೀಗಾಗಿ ಕಾಂಗ್ರೆಸ್‌ ಗೆಲ್ಲಿಸಿ, ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ನಿಮ್ಮ ಮನೆ-ಮಗಳನ್ನು ಕೈ ಹಿಡಿದು ನಡೆಸಿ ಎಂದು ಪ್ರಿಯಂಕಾ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಕಾಂಗ್ರೆಸ್‌ ಎಲ್ಲಾ ಸಮುದಾಯದ ಹಿತವನ್ನು ಬಯಸಿದೆ, ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸಬೇಕಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆಯುವ ಮೂಲಕ ಜನರ ಮನಸ್ಸು ಗೆದ್ದಿದೆ. ಹೀಗಾಗಿ ಮುಂಬರುವ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನಿಮ್ಮ ಮಗಳನ್ನು ಗೆಲ್ಲಿಸಿ ಆಶೀರ್ವದಿಸಬೇಕು‌ ಎಂದು ಮನವಿ‌ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article