ತುಮಕೂರು ಜೈನ ಸಮಾಜಕ್ಕೆ 15 ಹೊಸ ನಿರ್ದೇಶಕರ ಆಯ್ಕೆ”

Kuntinath
WhatsApp Group Join Now
Telegram Group Join Now

“ಜೈನ ಸಮಾಜಕ್ಕೆ 15 ಹೊಸ ನಿರ್ದೇಶಕರ ಆಯ್ಕೆ”

 

ವರದಿ:

ಜೆ. ರಂಗನಾಥ . ತುಮಕೂರು

________________________________
ತುಮಕೂರು

ತುಮಕೂರಿನ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ದ ನಿರ್ದೇಶಕ ಸ್ಥಾನಕ್ಕೆ ಇಂದು ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ,ಇಂದೇ ಮತ ಎಣಿಕೆ ನಡೆಯಿತು .ಈ ಚುನಾವಣೆಯಲ್ಲಿ ಒಟ್ಟು 14 ಪುರುಷರು ಹಾಗೂ ಒಂದು ಮಹಿಳಾ ಮೀಸಲು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 15 ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಗಿದೆ.

ಶ್ರೀ ಬಿ.ಎಲ್ .ಚಂದ್ರಕೀರ್ತಿ 655 ಮತಗಳು , ಎಸ್. ವಿ .ಜಿನೇಶ್ 769 ಮತಗಳು ,ಎಸ್‌.ಜೆ, ನಾಗರಾಜ್ 737 ಮತಗಳು, ಟಿ .ಜೆ .ನಾಗರಾಜ್ 766 ಮತಗಳು, ಎಂ .ಬಿ. ನಾಗೇಂದ್ರ 672 ಮತಗಳು, ಟಿ.ಕೆ .ಪದ್ಮರಾಜ್ 745 ಮತಗಳು, ಬಿ .ಎಸ್ .ಪಾಶ್ವನಾಥ್ 799 ಮತಗಳು, ಟಿ.ವಿ .ಪಾಶ್ವನಾಥ್ 784 ಮತಗಳು, ಟಿ.ಡಿ.ಬಾಹುಬಲಿ 801ಮತಗಳು, ಟಿ.ಡಿ .ಮಹಾವೀರ್ 744 ಮತಗಳು, ಎ. ಎನ್ .ಮಂಜುನಾಥ್ 707 ಮತಗಳು ಶೀತಲ್,(ತೋವಿನಕೆರೆ ) 750 ಮತಗಳು, ಟಿ ಸಿ. ಶೀತಲ್ ಕುಮಾರ್( ಬಳೆ ) 720 ಮತಗಳು, ಸುಭೋದ ಕುಮಾರ್ ಜೈನ್791 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ ಜ್ವಾಲಾ ಮಾಲಿನಿ (ಮಾಲಮ್ಮ ) 680 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

ಅತಿ ಹೆಚ್ಚು ಅಂಕಗಳನ್ನು ಪಡೆದು ವಿಜೇತರಾಗಿರುವ ಟಿ .ಡಿ .ಬಾಹುಬಲಿ (ಬೆಲ್ಲ ಬಾಬು) ಅವರನ್ನು ಹಲವಾರು ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಚುನಾವಣಾ ಅಧಿಕಾರಿ ಗಳಾಗಿ ರಾಜೇಂದ್ರ ಪ್ರಸಾದ್ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article